ಅಮರಾವತಿ : ತೆಲುಗುದೇಶಂ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಚಿತ್ರನಟರಾದ ರಜನೀಕಾಂತ್, ಚಿರಂಜೀವಿ ಸಮ್ಮುಖ ನಡೆದ ಈ ಶಪಥಗ್ರಹಣ ಸಮಾರಂಭದಲ್ಲಿ
ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ನಾಯ್ಡು ಪುತ್ರ ನಾರಾ ಲೋಕೇಶ್ ಅವರೂ ಮಂತ್ರಿಯಾಗಿ ಪ್ರಮಾಣವಚನ ತೆಗೆದು ಕೊಂಡರು. ಇದರೊಂದಿಗೆ ಪವನ್ ಕಲ್ಯಾಣ್ಅವರು ಉಪ ಮುಖ್ಯಮಂತ್ರಿಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ
ಆಂಧ್ರಪ್ರದೇಶ ರಾಜ್ಯಪಾಲ, ಈ ಕರ್ನಾಟಕ ಮೂಲದ ಎಸ್.ಅಬ್ದುಲ್ ನ ನಜೀರ್ ಅವರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರು ನಾಯ್ಡು ಅವರನ್ನು ಆಲಿಂಗಿಸಿದರು. ಬಳಿಕ ತೆಲುಗು ಮೆಗಾಸ್ಟಾರ್ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಸೋದರರ ಕೈ ಹಿಡಿದು ಮೇಲೆತ್ತಿ ಹುರಿದುಂಬಿಸಿದರು. ರಜನೀಕಾಂತ್ ದಂಪತಿ ಜತೆಗೂ ಇದೇವೇಳೆ ಕುಶಲೋಪರಿ ನಡೆಸಿದರು.