ಬೆಂಗಳೂರು : ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ಪೆಟ್ರೋಲ್, ಡೀಸೆಲ್ ದರ ಹೆಚ್ಚಾದ ಒಂದೇ ವಾರದಲ್ಲಿ ಹಾಲಿನ ದರವನ್ನೂ ಏರಿಕೆ ಮಾಡಲಾಗಿದೆ. ಪರಿಷ್ಕೃತ ಹಾಲಿನ ದರ ಬುಧವಾರ ಮಧ್ಯಾಹ್ನದಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ಉತ್ಪಾದಕರ ಹಾಲು ಮಹಾ ಮಂಡಳ (ಕೆಎಂಎಫ್) ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಎಲ್ಲ ಮಾದರಿಗಳ ನಂದಿನಿ ಹಾಲಿನ ದರ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಯಾಕಿನ ಮೇಲೆ ತಲಾ 2 ರು. ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಹೆಚ್ಚುವರಿಯಾಗಿ ಪಡೆಯುತ್ತಿರುವ ಈ 2 ರು.ಗೆ ಪ್ಯಾಕೇಟ್ನಲ್ಲಿ 50 ಮಿ.ಲೀ ಹಾಲು ಹೆಚ್ಚುವರಿಯಾಗಿ ಗ್ರಾಹ ಕರಿಗೆ ಸಿಗಲಿದೆ ಎಂದು ಹೇಳಿದರು