Home » ರಾಜ್ಯದಲ್ಲಿರೋದು ಕೈ ಸರ್ಕಾರವಲ್ಲ, ಖಬರಸ್ತಾನ್‌ ಸರ್ಕಾರ
 

ರಾಜ್ಯದಲ್ಲಿರೋದು ಕೈ ಸರ್ಕಾರವಲ್ಲ, ಖಬರಸ್ತಾನ್‌ ಸರ್ಕಾರ

: ಛಲವಾದಿ‌ ನಾರಾಯಣ ಸ್ವಾಮಿ

by Kundapur Xpress
Spread the love

ವಿಜಯಪುರ : ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಇದು ಖಬರಸ್ತಾನ್ ಸರ್ಕಾರ, ರೈತರ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಘೋಷಿಸುವ ಮೂಲಕ ಸಚಿವ ಜಮೀ‌ರ್ ಅಹ್ಮದ್ ಖಾನ್ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮಗೆ ಜಮೀನು ಬೇಕೆಂದು ಮಸೀದಿಗಳಿಂದ ಸರ್ಕಾರಕ್ಕೆ ಪತ್ರ ಹೋಗುತ್ತವೆ. ತಕ್ಷಣ ಅವರು ರೈತರ ಆಸ್ತಿಯನ್ನುವಕ್ಸ್ ಮಾಡಿಕೊಡುತ್ತಾರೆ ಎಂದು ಕಿಡಿಕಾರಿದರು. ಈ ಹಿಂದೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಓಟ್ ಹಾಕುವಾಗ ಹುಷಾರಾಗಿರಿ, ಅವರನ್ನು ಗೆಲ್ಲಿಸಿದರೆ ನಿಮ್ಮ ಜಮೀನು (ಆಸ್ತಿ) ಕಿತ್ತುಕೊಳ್ತಾರೆ ಎಂದಿದ್ದರು. ಅವರ ದೂರದೃಷ್ಟಿ ಈಗ ಕಾಂಗ್ರೆಸ್ ಬೆಂಬಲಿಸಿದವರಿಗೆ ಅರ್ಥ ಆಗಿದೆ ಎಂದರು.

   

Related Articles

error: Content is protected !!