Home » ಕದ್ದದ್ದು ವಾಪಾಸ್ಸು ಕೊಟ್ಟರೇ ಕಳ್ಳರಲ್ಲವೇ…?
 

ಕದ್ದದ್ದು ವಾಪಾಸ್ಸು ಕೊಟ್ಟರೇ ಕಳ್ಳರಲ್ಲವೇ…?

ಛಲವಾದಿ ನಾರಾಯಣ ಸ್ವಾಮಿ

by Kundapur Xpress
Spread the love

ಉಡುಪಿ : ಕಾಂಗ್ರೆಸ್‌ನಲ್ಲಿ ಹೊಸ ಅಲಿಖಿತ ಕಾನೂನು ಬಂದಿದೆ, ಯಾರು ಬೇಕಾದರೂ ಕದಿಯಬಹುದು. ಕದ್ದದನ್ನು ವಾಪಸ್‌ ಕೊಟ್ಟರೆ ನಂತರ ಅವರು ಕಳ್ಳರಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದರು. ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೈಟ್ ವಾಪಸ್ ನೀಡಿದ ಕುರಿತಾಗಿ ಪ್ರತಿಕ್ರಿಯಿಸಿದರು.

ಅವರು ಅಕ್ರಮವಾಗಿ ಪಡೆದ ಸೈಟ್‌ಗಳನ್ನು ವಾಪಸ್ ಕೊಟ್ಟರೆ ಬಿಜೆಪಿಯ ಹೋರಾಟದ ತೀವ್ರತೆ ಕಡಿಮೆಯಾಗುವುದಿಲ್ಲ. ನಮ್ಮ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಇನ್ನೂ ಚೆನ್ನಾಗಿಯೇ ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿಯವರು ಹೇಳಿದ ತಕ್ಷಣ ನಾನು ಬಟ್ಟೆಹರಿದುಕೊಳ್ಳುವುದಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಬಟ್ಟೆ ಹರಿದುಕೊಳ್ಳಿ ಎಂದು ನಾವೇನೂ ಹೇಳಿಲ್ಲ. ಅವರಿಗೆ ತಲೆನೇ ಇಲ್ಲ, ಹಾಗಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೈಪರಚಿಕೊಂಡು ಓಡಾಡುತ್ತಿದ್ದಾರೆ ಎಂದರು

 

Related Articles

error: Content is protected !!