ಬೆಂಗಳೂರು : ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತ್ವರಿತಗತಿಯ ವಿಶೇಷ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ. ನ್ಯಾಯಾಧೀಶ ಎಸ್.ಎಂ.ರಮೇಶ್ ಅವರು ಸಿಐಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಯಡಿಯೂರಪ್ಪ ಬಂಧನಕ್ಕೆ ಅನುಮತಿ ನೀಡಿದ್ದಾರೆ.
ಈ ಹಿನ್ನೆಲೆ ವಿಚಾರಣೆಗೆ ಗೈರಾದ ಯಡಿಯೂರಪ್ಪ ಅವರನ್ನು ಸಿಐಡಿ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ವಿಚಾರಣೆ ವೇಳೆ, ವಿಶೇಷ ಸರ್ಕಾರಿ ಪರ ವಕೀಲ ಅಶೋಕ್ ನಾಯಕ್ ಅವರು ವಾದ ಮಂಡಿಸಿದ್ದಾರೆ