Home » ರನ್ಯಾ ಚಿನ್ನ ಸ್ಟಗ್ಲಿಂಗ್ : ರಾಜ್ಯದ 16 ಕಡೆ ಇಡಿ ದಾಳಿ
 

ರನ್ಯಾ ಚಿನ್ನ ಸ್ಟಗ್ಲಿಂಗ್ : ರಾಜ್ಯದ 16 ಕಡೆ ಇಡಿ ದಾಳಿ

by Kundapur Xpress
Spread the love

ಬೆಂಗಳೂರು : ಸುಮಾರು 15 ಕೋಟಿ ಮೌಲ್ಯದ ಚಿನ್ನ ಕಳ್ಳಸಾ ಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಆರ್ಥಿಕ ವ್ಯವಹಾರಗಳ ಕುರಿತು ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಆಕೆಯ ಸಂಪರ್ಕದಲ್ಲಿದ್ದ ವ್ಯಕ್ತಿ ಮತ್ತು ಸಂಸ್ಥೆಯ 16 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ ದಾಳಿ ಕೈಗೊಂಡ ಇ.ಡಿ. ಅಧಿಕಾರಿಗಳು ತಡರಾತ್ರಿಯವರೆಗೆ ಶೋಧ ಕಾರ್ಯ ನಡೆಸಿ ಮಹತ್ವದ ದಾಖಲೆಗ ಳನ್ನು ವಶಕ್ಕೆ ಪಡೆದಿದ್ದಾರೆ. ಹವಾಲಾ ದಂಧೆ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೆ, ಪ್ರಭಾವಿ ವ್ಯಕ್ತಿ ಸೂಚನೆ ಮೇರೆಗೆ ಶೈಕ್ಷಣಿಕ ಟ್ರಸ್ಟ್ ಹಣವನ್ನು ಬೇರೆಡೆಗೆ ವರ್ಗಾಯಿಸಿ  ರನ್ಯಾ ರಾವ್ ಕ್ರೆಡಿಟ್‌ಕಾರ್ಡ್ ಬಿಲ್‌ಗೆ 40 ಲಕ್ಷ ರು. ಪಾವತಿಸಿರುವುದು ತಿಳಿದುಬಂದಿದೆ.

ಆದರೆ, ಇದನ್ನು ಖಚಿತಪಡಿಸಲು ಯಾವುದೇ ನಿಖರವಾದ ದಾಖಲೆಗಳು ಕಂಡು ಬಂದಿಲ್ಲ, ತನಿಖೆ ವೇಳೆ ಹಣ ಪಾವತಿಯಾಗಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!