ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ರಾಜಾತಿಥ್ಯದ ಪೋಟೋ ವೈರಲ್ ಆಗಿ ಎಲ್ಲೆಡೆ ಭಾರಿ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ ಆಂತರಿಕ ತನಿಖೆ ಮಾಡುವಂತೆ ಪರಪ್ಪನ ಅಗ್ರಹಾರದ ಡಿಜಿ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.
ಪರಪ್ಪನ ಕಾರಾಗೃಹದ ವಿಶೇಷ ಬ್ಯಾರಕ್‌ನ ಆವರಣದಲ್ಲಿ ದರ್ಶನ್, విಲ್ಸనా ಗಾರ್ಡನ್ ರೌಡಿಶೀಟರ್ ನಾಗ, ಮ್ಯಾನೇಜರ್ ನಾಗರಾಜ್, ಕೋಣನಕುಂಟೆ ಆರೋಪಿ ಕುಳ್ಳ ಸೀನಾ ಜತೆಗೆ ಕುಳಿತುಕೊಂಡು ಕಾಫಿ ಮಗ್ಗನ್ನು ಕೈಯಲ್ಲಿಟ್ಟುಕೊಂಡು ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ಜೈಲು ಅಧಿಕಾರಿಗಳು ಜೈಲಿನ ನಿಯಮಗಳನ್ನು ಉಲ್ಲಂಘಿಸಿ, ದರ್ಶನ್‌ಗೆ ಎಲ್ಲ ರೀತಿಯ ಸೌಲಭ್ಯ ನೀಡಿದ್ದಾರೆಂಬ ಆರೋಪವೂ ಕೇಳಿಬರುತ್ತಿದೆ. ದರ್ಶನ್ ಸೇರಿ ಮೂವರು ಆರೋಪಿಗಳು ಕೈಯಲ್ಲಿ ಕಾಫಿ ಮಗ್, ಸಿಗರೇಟ್ ಹಿಡಿದುಕೊಂಡು ನಗುತ್ತಲೇ ಹರಟೆ ಹೊಡೆಯು ತ್ತಿರುವ ದೃಶ್ಯದಲ್ಲಿ ಆರೋಪಿಗಳಿಗೆ ಜೈಲು ಆವರಣದಲ್ಲಿಯೇ ಕುಳಿತು ಕೊಳ್ಳಲು ಕುರ್ಚಿ, ಟೀಪಾಯಿಗಳ ವ್ಯವಸ್ಥೆ ಮಾಡಲಾಗಿರುವುದು ಕಂಡು ಬಂದಿದೆ. ಅಲ್ಲದೇ ರೌಡಿಗಳೊಂದಿಗೆ ದರ್ಶನ್ ಕ್ರೀಡೆ, ವಾಲಿಬಾಲ್ ಆಟ ವಾಡುತ್ತಿದ್ದು, ದರ್ಶನ್ ತನ್ನ ಫಾರ್ಮ್ ಹೌಸ್‌ನಲ್ಲಿ ಇರುವ ರೀತಿಯಲ್ಲೇ ಬಿಂದಾಸ್ ಆಗಿದ್ದಾರೆಂದು ತಿಳಿದು ಬಂದಿದೆ. ಕೊಲೆ ಆರೋಪಿ ದರ್ಶನ್ ಗೆ ಜೈಲಿನಲ್ಲಿ ಸಿಗರೇಟ್ ಹೇಗೆ ಸಿಕ್ಕಿದೆ, ಹಣ ಕೊಟ್ಟರೆ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತಾ? ಜೈಲಿನಲ್ಲಿ ಕೊಲೆ ಆರೋಪಿಗಳ ಐಷಾರಾಮಿ ಜೀವನ ಇರುತ್ತಾ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ
ಜೈಲಾಧಿಕಾರಿಗಳಿಗೆ ಸೂಚನೆ :
ಇತರೆ ರೌಡಿಗಳೊಂದಿಗೆ ದರ್ಶನ್ ಹೇಗೆ ಇದ್ದರು ? ಹೇಗೆ ಅವರ ಸ್ನೇಹವಾಯಿತು? ಈ ಮೊದಲು ಅವರಿಗೂ ದರ್ಶನ್‌ಗೂ ಪರಿಚಯವಿತ್ತೇ ? ಸೇರಿದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ, ಸಿಸಿ ಟಿವಿ ಕ್ಯಾಮೆರಾಗಳ ಸಾಕ್ಷ್ಯಗಳನ್ನು ಸಂಗ್ರಹಿಸಿ, ಮಾಹಿತಿ ಪಡೆಯಲು ಜೈಲು ಅಧಿಕಾರಿಗಳಾದ ಆನಂದ್ ರೆಡ್ಡಿ ಮತ್ತು ಸೋಮಶೇಖರ್ ಅವರಿಗೆ ಸೂಚಿಸಲಾಗಿದೆ ಎಂದು ಪರಪ್ಪನ ಅಗ್ರಹಾರದ ಡಿಜಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ