Home » ಕಾವೇರಿ ನದಿಗೆ ಮಾಜಿ ಸಿಎಂ ಕೃಷ್ಣರ ಚಿತಾಭಸ್ಮ ವಿಸರ್ಜನೆ
 

ಕಾವೇರಿ ನದಿಗೆ ಮಾಜಿ ಸಿಎಂ ಕೃಷ್ಣರ ಚಿತಾಭಸ್ಮ ವಿಸರ್ಜನೆ

ಮೊಮ್ಮಗ ಅಮರ್ತ್ಯ ಹೆಗ್ಡೆಯಿಂದ ಪೂಜಾ ವಿಧಿ

by Kundapur Xpress
Spread the love

ಶ್ರೀರಂಗಪಟ್ಟಣ : ಪಟ್ಟಣ ಹೊರವಲಯದ ಪಶ್ಚಿಮ ವಾಹಿನಿಯಲ್ಲಿನ ಕಾವೇರಿ ನದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಚಿತಾಭಸ್ಮವನ್ನು ಮೊಮ್ಮಗ ಅಮರ್ತ್ಯ ಹೆಗ್ಡೆ ಭಾನುವಾರ ವಿಸರ್ಜನೆ ಮಾಡಿದರು. ವೇದ ಬ್ರಹ್ಮ ಡಾ.ವಿ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವೈಧಿಕರ ತಂಡ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಮೊಮ್ಮಗನ ಮೂಲಕ ಅಸ್ಥಿ ವಿಸರ್ಜಿಸಲಾಯಿತು. ಅರ್ಚಕ ಲಕ್ಷ್ಮೀಶ್ ಸೇರಿ ಇತರ ವೈದಿಕರ ತಂಡ ಪೂಜೆ ನೆರವೇರಿಸಿತು. ಎಸ್.ಎಂ.ಕೃಷ್ಣರ ಪುತ್ರಿಯರಾದ ಶಾಂಭವಿ, ಮಾಳವಿಕಾ, ಸಹೋದರನ ಪುತ್ರ ಗುರುಚರಣ್, ಅಮರ್ತ್ಯ ಹೆಗ್ಡೆ ಪತ್ನಿ ಡಿಕೆಶಿ ಪುತ್ರಿ ಐಶ್ವರ್ಯಾ ಸೇರಿ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದ ಮುಖ್ಯಸ್ಥರು ಉಪಸ್ಥಿತರಿದ್ದರು.

ಸೋನಿಯಾ ಸಂತಾಪ ಪತ್ರ:

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಸ್. ಎಂ.ಕೃಷ್ಣ ಅವರ ಪುತ್ರಿ ಮಾಳವಿಕಗೆ ಪತ್ರ ಬರೆದಿರುವ ಅವರು, ನಿಮ್ಮ ಗೌರವಾನ್ವಿತ ತಂದೆ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದ ಬಗ್ಗೆ ತಿಳಿದು ನನಗೆ ದುಃಖವಾಗಿದೆ. ದಯವಿಟ್ಟು ನನ್ನ ಹೃತ್ತೂರ್ವಕ ಸಂತಾಪ ಸ್ವೀಕರಿಸಿ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ.

 

Related Articles

error: Content is protected !!