ಬೆಂಗಳೂರು : ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳನ್ನು ಓದಿ ಮನೆಯ ಮಕ್ಕಳಿಗೆ ಪುಸ್ತಕ ಓದಿಸುವ ಹವ್ಯಾಸವನ್ನು ಆಳವಡಿಸಿಕೊಳ್ಳಬೇಕು ಸಾಹಿತಿ ಸುಧಾಮೂರ್ತಿ ಕರೆ ನೀಡಿದರು
ಕರ್ನಾಟಕ ಏಕೀಕರಣಕ್ಕೂ ಮೊದಲು ಕರ್ನಾಟಕವು ಹರಿದು ಹಂಚಿ ಹೋಗಿತ್ತು. ಎಲ್ಲರೂ ಕನ್ನಡ ಭಾಷೆ ಮಾತನಾಡಿದರೂ, ಕರ್ನಾಟಕವು ಭೌಗೋಳಿಕವಾಗಿ ಭಿನ್ನವಾಗಿತ್ತು ಎಂದು ಸಾಹಿತಿ ಸುಧಾಮೂರ್ತಿ ತಿಳಿಸಿದರು.
ಸಪ್ನ ಬುಕ್‌ಹೌಸ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಗಾಂಧಿನಗರದ ಸಪ್ನ ಬುಕ್ ಹೌಸ್ ನಲ್ಲಿ ಹಮ್ಮಿಕೊಂಡ ಪುಸ್ತಕ ಜಾತ್ರೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಪೂರ್ವದಲ್ಲಿ ನಾವು ಕರ್ನಾಟಕದವರಾಗಿದ್ದರೂ, ಮುಂಬಯಿ ಕರ್ನಾಟಕ ಹಾಗೂ ಬಳ್ಳಾರಿ, ಕಲಬುರಗಿ ರಾಯಚೂರಿನವರಿಗೆ ಹೈದ್ರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಇವೆರೆಲ್ಲರೂ ಕನ್ನಡ ಭಾಷೆ ಮಾತನಾಡುತ್ತಿದ್ದರೂ, ಭೌಗೋಳಿಕ ಹಣೆಪಟ್ಟಿ ಬೇರೆಯಾಗಿತ್ತು. ಇದರಿಂದಾಗಿ ಕನ್ನಡಿಗರು ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು ಎಂದರು