Home » ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಚಿರನಿದ್ರೆಗೆ
 

‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಚಿರನಿದ್ರೆಗೆ

by Kundapur Xpress
Spread the love

ಬೆಂಗಳೂರು : ಬಹುಭಾಷಾ ನಟಿ, ದಕ್ಷಿಣ ಭಾರತೀಯ ಚಿತ್ರರಂಗದ ಮೊದಲ ‘ಮಹಿಳಾ ಸೂಪರ್ ಸ್ಟಾರ್’, ಪದ್ಮಭೂಷಣ ಪುರಸ್ಕೃತ ಹಿರಿಯ ಕಲಾವಿದೆ ಬಿ.ಸರೋಜಾದೇವಿ ಅವರು ವಯೋಸಹಜ ಅನಾರೋಗ್ಯದಿಂದ  ನಗರದಲ್ಲಿ ನಿಧನರಾದರು ಅವರಿಗೆ 87 ವರ್ಷ ವಯಸ್ಸಾಗಿತ್ತು

ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಸರೋಜಾದೇವಿ ಅವರ ಹುಟ್ಟೂರು ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ವರ್ಗದವರು ತೀರ್ಮಾನಿಸಿದ್ದಾರೆ.

ಮೃತರು ತಮ್ಮ ಪುತ್ರ ಗೌತಮ್ ಮತ್ತು ಅಪಾರ ಅಭಿಮಾನಿಗಳು, ಬಂಧು, ಮಿತ್ರರನ್ನು ಅಗಲಿದ್ದಾರೆ. ಬಿ.ಸರೋಜಾದೇವಿ ಅವರ ಪತಿ ಶ್ರೀಹರ್ಷ (1986ರಲ್ಲಿ) ನಿಧನರಾಗಿದ್ದರು. ಇವರ ದತ್ತು ಪುತ್ರಿ ಭುವನೇಶ್ವರಿ ಕೂಡ ಕೆಲ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು.

ಸರೋಜಾದೇವಿ ಸೋಮವಾರ ಪೂಜೆ ಬಳಿಕ ಬೆಳಗ್ಗೆ 9.00 ಗಂಟೆ ವೇಳೆಗೆ ಟಿವಿ ಆನ್ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು ಮತ್ತು ಅರೆಪ್ರಜ್ಞಾವಸ್ಥೆಗೆ ಹೋದರು. ಕೂಡಲೇ ಮಣಿಪಾಲ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಸರೋಜಾ ದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ ಬಹುಭಾಷೆಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾಗಿದ್ದರು.

 

Related Articles

error: Content is protected !!