ಮುಂಬೈ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಟೋಯಿ ತಂಡ ಹೊತ್ತುಕೊಂಡಿದೆ. ಶನಿವಾರ ರಾತ್ರಿ 66 ವರ್ಷದ ಎನ್‌ಸಿಪಿ ನಾಯಕನನ್ನು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
ಪೊಲೀಸರ ಪ್ರಕಾರ, ಮೂವರು ಶೂಟರ್ ಗಳು ಹತ್ಯೆಯಲ್ಲಿ ಭಾಗಿಯಾಗಿದ್ದು, ಇಬ್ಬರನ್ನು ಹರ್ಯಾಣದ ಗುರ್ಮೈಲ್ ಬಲ್ಟಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರಮರಾಜ್ ಕಶ್ಯಪ್ ನನ್ನು ( 19) ಬಂಧಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಉತ್ತರ ಪ್ರದೇಶದ ಶಿವಕುಮಾರ್ ಗೌತಮ್ ಎಂದು ಗುರುತಿಸಲಾಗಿದೆ. ಹ್ಯಾಂಡ್ಲರ್ ಎಂದು ನಂಬಲಾದ ನಾಲ್ಕನೇ ವ್ಯಕ್ತಿಯೂ ಪರಾರಿಯಾಗಿದ್ದಾನೆ. ಇಬ್ಬರೂ ಬಂಧಿತರು ನೆರೆಹೊರೆಯವರಾಗಿದ್ದು ಕ್ರಿಮಿನಲ್ ಭೂಗತ ಜಗತ್ತಿನಲ್ಲಿ ಆಕರ್ಷಿತರಾಗುವ ಮೊದಲು ಪುಣೆಯಲ್ಲಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ 9:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಸಿದ್ದಿಕಿ ಮತ್ತು ಅವರ ಸಹಚರರ ಮೇಲೆ ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದರು. ಎದೆಗೆ ಗುಂಡು ತಗುಲಿದ್ದರಿಂದ ಸಿದ್ದಿಕಿ ಮೃತಪಟ್ಟಿದ್ದಾರೆ