104
ಬೆಂಗಳೂರು : 16ನೇ ಬಾರಿ ಬಜೆಟ್ ಮಂಡಿಸಿದ ರಾಜ್ಯದ ಏಕೈಕ ವ್ಯಕ್ತಿಯಾಗಿ ಸಿಎಂ ಸಿದ್ದರಾಮಯ್ಯ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಸರ್ಕಾರದ ಬಳಿ ಹಣವಿಲ್ಲದೆ ಇರುವುದರಿಂದ ಹೆಚ್ಚೇನೂ ನಿರೀಕ್ಷೆ ಇಲ್ಲದಿದ್ದರೂ, ಅಲ್ಪದರಲ್ಲೇ ಬಹು ಕೊಡುಗೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಸರ್ವಸ್ವರ್ಶಿಯಾದ ಅಲ್ಪಸಂಖ್ಯಾತರನ್ನು ಹೆಚ್ಚು ಸ್ಪರ್ಶಿಸಿದ ಬಜೆಟ್ ಎಂದರೆ ತಪ್ಪಾಗಲಾರದು
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ 4 ಲಕ್ಷ ಕೋಟಿ ರು. ಆಯವ್ಯಯವನ್ನು ಕುರ್ಚಿ ಮೇಲೆ ಕುಳಿತೇ ಮಂಡಿಸಿದ್ದು ಇದೂ ದಾಖಲೆಯಾಗಿದೆ ಸ್ತ್ರೀಯರು, ಮಕ್ಕಳು, ರೈತರು, ಸೌಕರ್ಯಕ್ಕೆ ಒತ್ತು ನೀಡಲು ಕಸರತ್ತು ನಡೆಸಿದ ಸಿದ್ದರಾಮಯ್ಯ ಐದೂ ಗ್ಯಾರಂಟಿ ಸ್ಟೀಂಗಳನ್ನು ರದ್ದುಮಾಡದೇ ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡಿದ್ದಾರೆ

