ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಸೇರಿ 3 ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು ಖಚಿತವಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಈ ಪ್ರಕರಣದಲ್ಲಿ ರನ್ಯಾ, ತರುಣ್ ಮತ್ತು ಸಾಹಿಲ್ ಸಕಾರಿಯಾ ಜೈನ್‌ನನ್ನು ಕಾಫಿ ಪೋಸಾ ಕಾಯ್ದೆ (ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ) ಅಡಿ ಬಂಧಿಸಿದ್ದರು. ಈ ಬಂಧನವನ್ನು ಕಾಫಿಪೋಸಾ ಸಲಹಾ ಮಂಡಳಿ ಅನುಮೋದಿಸಿದೆ. ಹೀಗಾಗಿ ಮೂವರು ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ
ಆರೋಪಿಗಳು ಭವಿಷ್ಯದಲ್ಲಿ ಮತ್ತೆ ಕಳ್ಳ ಸಾಗಣೆಯಲ್ಲಿ ತೊಡಗಬಾರದೆಂಬ ಕಾರಣದಿಂದ ಡಿಆರ್‌ಐ ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿತ್ತು ಈ ಕಾಯ್ದೆ ಏಕೆ ಜಾರಿಗೊಳಿಸಲ ಗಿದೆ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲಹಾ ಮಂಡಳಿಗೆ ಸಲ್ಲಿಸಿದ್ದರು. ಪರಿಶೀಲನೆ ಮಾಡಿರುವ ಸಲಹಾ ಮಂಡಳಿಯು ಈ ಮೂವರು ಆರೋಪಿಗಳನ್ನು ಡಿಆರ್‌ಐ ಅಧಿಕಾರಿಗಳು ಕಾಫಿಪೋಸಾ ಕಾಯ್ದೆಯಡಿ ಬಂಧಿಸಿರುವುದನ್ನು ಅನುಮೋದಿಸಿದೆ.
ಹೀಗಾಗಿ 3 ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಜೈಲಿನಲ್ಲೇ ಇರುವುದು ಖಚಿತವಾಗಿದೆ

