ಬೆಂಗಳೂರು: ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟುಗಳು ಸುಖಾಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿವೆ.
ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಪಕ್ಷಕ್ಕೆ ಚೈತನ್ಯ ನೀಡಲು ಪಕ್ಷದ ವರಿಷ್ಠರು ಕೈಗೊಂಡ ಕ್ರಮಗಳು ಫಲ ನೀಡುವ ಸಾಧ್ಯತೆಗಳಿದ್ದು ಬಂಡಾಯ ಮತ್ತು ತಟಸ್ಥ ನಾಯಕರಿಗೆ ಹೈಕಮಾಂಡ್ ಸೂಚನೆಯನ್ನು ಪಾಲಿಸುವಂತೆ ಆದೇಶಿಸಲಾಗಿದೆ.
ಪಕ್ಷದ ಆಂತರಿಕ ಗೊಂದಲಗಳನ್ನುಸಮರೋಪಾದಿಯಲ್ಲಿ ನಿಯಂತ್ರಿಸಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಗುಂಪುಗಾರಿಕೆ ಮತ್ತು ಬಂಡಾಯದಿಂದ ಪಕ್ಷದ ವರ್ಚಸ್ಸಿಗೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಗಿದ್ದು ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಕ್ಷದ ನಿಯಮಗಳನ್ನು ಪಾಲಿಸು ವಂತೆ ಎಲ್ಲಾ ನಾಯಕರಿಗೆ ಕಟ್ಟಾಜ್ಞೆ ವಿಧಿಸಲಾಗಿದೆ.