Home » ರೇಷನ್‌ ಕಾರ್ಡ್‌ ರದ್ದು : ಕಲಪದಲ್ಲಿ ಹೋರಾಟ
 

ರೇಷನ್‌ ಕಾರ್ಡ್‌ ರದ್ದು : ಕಲಪದಲ್ಲಿ ಹೋರಾಟ

ವಿ. ಸುನಿಲ್‌ ಕುಮಾರ್

by Kundapur Xpress
Spread the love

ಹಾಸನ : ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರೇಷನ್ ಕಾರ್ಡ್ಗಳನ್ನು ರದ್ದು ಮಾಡುತ್ತಿದ್ದು ಇದರ ವಿರುದ್ಧ ನಾವು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರದ ವಿರುದ್ಧ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೋರಾಡಲು ಸಿದ್ಧರಾಗಿದ್ದೇವೆ ಎಂದು ಶಾಸಕ ಸುನಿಲ್ ಕುಮಾರ್‌ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿ ಹಾಗೂ ಹಗರಣಗಳಿಂದ ಕೂಡಿದ ಭ್ರಷ್ಟ ಸರ್ಕಾರವಿದೆ ರಾಜ್ಯಾದ್ಯಂತ 2 ತಿಂಗಳ ಅವಧಿಯಲ್ಲಿ 11 ಲಕ್ಷ ಬಿಪಿಎಲ್ ಕಾರ್ಡಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದ್ದು ಈ ಪ್ರಕ್ರಿಯೇ ಇನ್ನು ನಿಂತಿಲ್ಲ, ಇದರಿಂದಾಗಿ ಕೇಂದ್ರ, ರಾಜ್ಯ ಸರ್ಕಾರದ ಅನೇಕ ಸೌಲಭ್ಯಗಳಿಂದ ಬಡವರು ವಂಚಿತರಾಗುತ್ತಾರೆ. ಬಡವರ ಪರವೆಂದು ಭಾಷಣ ಮಾಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೇಷನ್ ಕಾರ್ಡ್ ರದ್ದು ಮಾಡಿದ ಸರ್ಕಾರ ಬಂದಿರುವುದು ಕರ್ನಾಟಕದ ಇತಿಹಾಸದಲ್ಲೇ ಇದೆ ಮೊದಲು ಎಂದು ಕಿಡಿ ಕಾರಿದರು

ದೇವಾಲಯ, ಮಠ, ಪಾರ್ಕ್, ಶಾಲೆ, ಮನೆ, ತೋಟ ಹೀಗೆ ಎಲ್ಲವನ್ನು ವಕ್ಸ್ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಮುಂದಾಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಆಘಾತಕಾರಿ ಬೆಳವಣಿಗೆ. ಈ ಈ ಕುರಿತು ರಾಜ್ಯಾದ್ಯಂತ 25 ಜನರ 3 ತಂಡ ಪ್ರವಾಸ ಮಾಡಲುತೀರ್ಮಾನ ಕೈಗೊಂಡಿದ್ದೇವೆ ಎಂದರು.

 

Related Articles

error: Content is protected !!