Home » ಕಾಲು ನೋವಿನಲ್ಲೂ ಎದ್ದು ನಿಂತೇ ರಾಜ್ಯಪಾಲರಿಗೆ ಸಿದ್ದು ಸ್ವಾಗತ
 

ಕಾಲು ನೋವಿನಲ್ಲೂ ಎದ್ದು ನಿಂತೇ ರಾಜ್ಯಪಾಲರಿಗೆ ಸಿದ್ದು ಸ್ವಾಗತ

by Kundapur Xpress
Spread the love

ಬೆಂಗಳೂರು :  ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವ ರನ್ನು ಸ್ವಾಗತಿಸಲು ಕಾಲು ನೋವಿನ ನಡುವೆಯೂ ಸುಮಾರು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಎದುರು ನಿಂತೇ ಇದ್ದರು.

ಮತ್ತೊಂದೆಡೆ ವೀಲ್‌ ಚೇರ್ ಮೂಲಕ ಹರಸಾಹಸ ಪಟ್ಟು ವಿಧಾನಸಭೆ ಸಭಾಂಗಣಕ್ಕೆ ಪ್ರವೇಶಿಸಿದ ಸಿದ್ದರಾಮಯ್ಯ ಅವರಿಗಾಗಿ ರಾಜ್ಯಪಾಲರರು ಸದನದ ಭಾವಿ ಬಳಿಯೇ ಕಾದರು. ತನ್ಮೂಲಕ ಇಬ್ಬರೂ ನಾಯಕರು ಪರಸ್ಪರ ಗೌರವ, ಅಭಿಮಾನ ಮೆರೆದರು.

ಸಂತಾಪ ಸೂಚನೆ ನಿರ್ಣಯದ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಿನ ನೋವಿನ ನಡುವೆಯೇ ಸುಮಾರು 20 ನಿಮಿಷಗಳ ಕಾಲ ನಿಂತೇ ಭಾಷಣ ಮಾಡಿದರು.

 

Related Articles

error: Content is protected !!