ಹುಬ್ಬಳ್ಳಿ : ರಾಜ್ಯದಲ್ಲಿ ನಡೆಯುತ್ತಿರುವ ವಕ್ಸ್ ಮಂಡಳಿ ವಿವಾದ ಗುರುವಾರ ಕೇಂದ್ರ ವಕ್ಸ್ ಬೋರ್ಡ್ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿಯ ಮುಂದೆಯೂ ಪ್ರಸ್ತಾಪವಾಯಿತು. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ ಸೇರಿ ಈ ಭಾಗದ ಹಲವು ಜಿಲ್ಲೆಯ ಭೂಮಿ ಕಳೆದುಕೊಂಡ ರೈತರು ಹಾಗೂ ಜನಸಾಮಾನ್ಯರು ಜಂಟಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ತಮ್ಮ ಅಳಲು ತೊಡಿಕೊಂಡರು.
ಭಾರತೀಯ ಕಿಸಾನ್ ಸಂಘ, ಶ್ರೀರಾಮ ಸೇನೆ, ರತ್ನ ಭಾರತ ರೈತ ಸಮಾಜ, ಹಿಂದೂ ಜಾಗರಣ ವೇದಿಕೆ, ಹಾವೇರಿ ವಕೀಲರ ಸಂಘ, ಅದೈತ್ ಪರಿಷತ್ ಉತ್ತರ ಕರ್ನಾಟಕ ವಕೀಲರ ಸಂಘ ಸದಸ್ಯರು ಹಾಗೂ ಅನ್ಯಾಯಾಕ್ಕೊಳಗಾದ ರೈತರು ಮನವಿ ಸಲ್ಲಿಸಿದರು ಸುಮಾರು 75ಕ್ಕೂ ಹೆಚ್ಚು ಅಹವಾಲುಗಳನ್ನು ಸಮಿತಿ ಸ್ವೀಕರಿಸಿತು
ಈ ಸಂದರ್ಭದಲ್ಲಿ ವಕ್ಸ್ ಬೋರ್ಡ್ ಹಠಾವೋ, ದೇಶ್ ಬಚಾವೋ, ವಕ್ಸ್ ಬೋರ್ಡ್ ತಿದ್ದುಪಡಿ ಮಸೂದೆ ಜಾರಿಗೊಳಿಸಿ, ವಕ್ಸ್ ಬೋರ್ಡ್ ಗೆಜೆಟ್ ಅನ್ನು ರದ್ದುಪಡಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಂದಗೋಳ, ನರಗುಂದ, ಹಾನಗಲ್ ಸೇರಿ 700ರಿಂದ 800 ಎಕರೆ ವಕ್ಸ್ ಬೋರ್ಡ್ ಹೆಸರಿಗೆ ನೋಂದಣಿ ಮಾಡಲಾಗಿದ್ದು, ಇದನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಸಭೆಯಲ್ಲಿದ್ದ ರೈತರು ಮನವಿ ಮಾಡಿದರು. 1 ಗಂಟೆಗೂ ಹೆಚ್ಚು ಕಾಲ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯಿತು