ಬೆಂಗಳೂರು : ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ವಕ್ಸ್ ಆಸ್ತಿ ವಿವಾದಕ್ಕೆ ಸಂಬಂಧಿಸಿ ಬಿಜೆಪಿ ಕೈಗೊಳ್ಳುತ್ತಿ ರುವ ನಮ್ಮ ಭೂಮಿ ನಮ್ಮ ಹಕ್ಕು ಜನಾಂದೋಲನ ಅಧಿಕೃತವಾಗಿ ಬುಧವಾರ ಪ್ರಾರಂಭವಾಗಲಿದೆ.
ಡಿ.9ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಸದನದೊಳಗೆ ರೈತರ ಪರವಾಗಿ ಬಿಜೆಪಿ ತನ್ನ ಹೋರಾಟವನ್ನು ಉಗ್ರವಾಗಿ ಮುಂದುವರಿಸಲಿದೆ. ಸದನಕ್ಕೆ ಪ್ರವೇಶ ಆಗುವುದಕ್ಕೆ ಮೊದಲು ರಾಜ್ಯಾದ್ಯಂತ 3 ತಂಡಗಳನ್ನು ರಚಿಸಿ ಸಂಬಂಧಿತ ಜಿಲ್ಲೆಗಳಲ್ಲಿ ಡಿ.4 ರಿಂದ 6 ರವರೆಗೆ ಪ್ರವಾಸ ಮಾಡಿ ಸದನಕ್ಕೆ ಬರಲಿವೆ.
ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ 3 ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ, ಬಡವರ, ಮಠ – ಮಂದಿರಗಳ ಜಮೀನುಗಳನ್ನು ಅಕ್ರಮವಾಗಿ ವಕ್ಸ್ ಬೋರ್ಡ್ ಹೆಸರಿನಲ್ಲಿ ಕಬಳಿಸುತ್ತಿರುವ ಕುರಿತು ವಿಸ್ತ್ರತ ವರದಿ ಸಂಗ್ರಹಿಸಲಿವೆ. ಬಿಜೆಪಿ ಈ ಮೂರು ತಂಡಗಳಲ್ಲಿ ಪಕ್ಷದ ನಾಯಕರು, ವಕೀಲರು ಇದ್ದಾರೆ. ವಿಜಯೇಂದ್ರ ನೇತೃತ್ವದ ತಂಡ ಬುಧವಾರ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ.