ವಿಜಯಪುರ : ವಕ್ಸ್ ಆಸ್ತಿ ಗದ್ದಲದ ನಡುವೆಯೇ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ವಕ್ಸ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡುವಂತೆ ಆಗ್ರಹಿಸಿದ್ದಾರೆ. ಪ್ರಧಾನಿಗೆ ಬರೆದ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿಯಾಗಲು ಬಿಡಬಾರದು ಎಂಬ ಕಾರಣದಿಂದ ನಾನು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಈ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು. ಇಲ್ಲವಾದರೆ ರೈತರು, ಮಠ, ಮಂದಿರಗಳು ಗ್ರಾಮಗಳನ್ನು ವಕ್ಸ್ ಆಸ್ತಿಯನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದರು.
ನೆಹರು ಗಾಂಧಿ ಅವರು ಮಾಡಿದ ವಕ್ಫ್ ಎಂಬ ಕರಾಳ ಶಾಸನದ ಪಾಪದ ಕೊಡ ಭಾರತವನ್ನೇ ನುಂಗುತ್ತಿದೆ. ಹೀಗಾಗಿ ಎಲ್ಲಾವ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡಿ ಸಾರ್ವಜನಿಕರಿಗೆ, ಹಿಂದುಳಿದ ದಲಿತ ಜನಾಂಗದ ಅಭಿವೃದ್ಧಿಗೆ ಉಪಯೋಗ ಮಾಡಬೇಕು ಎಂದರು
ವಿಜಯಪುರ ಸೇರಿ ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ, ಮಠಗಳು, ದೇವಸ್ಥಾನಗಳ ಆಸ್ತಿ ದಾಖಲೆ ಗಳಲ್ಲಿ ‘ವಕ್ಫ್ಆಸ್ತಿ’ ಎಂದು ನಮೂದಾಗಿರುವುದು ರೈತರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು