Home » ಕೊಲೆ ಮಾಡಿಸಿದ್ದೇ ಕೈ ಶಾಸಕ ವಿನಯ್‌ ಕುಲಕರ್ಣಿ : ಮುತ್ತಗಿ
 

ಕೊಲೆ ಮಾಡಿಸಿದ್ದೇ ಕೈ ಶಾಸಕ ವಿನಯ್‌ ಕುಲಕರ್ಣಿ : ಮುತ್ತಗಿ

ಕೋರ್ಟ್ನಲ್ಲಿ ಶಾಸಕರ ಆಪ್ತನಿಂದ ತಪ್ಪೋಪ್ಪಿಗೆ

by Kundapur Xpress
Spread the love

ಬೆಂಗಳೂರು : ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ ಧಾರವಾಡ ಜಿಪಂ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಶಾಸಕ ವಿನಯ್ ಕುಲಕರ್ಣಿಯೇ ಪ್ರಮುಖ ಕಾರಣ ಆತನ ಸೂಚನೆ ಮೇರೆಗೆ ಬೆಂಗಳೂರಿನಿಂದ ಕೆಲವರನ್ನು ಕರೆಸಿ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ ಎಂಬ ವಿಚಾರ ಶಾಸಕರ ಆಪ್ತನಿಂದಲೇ ಬಯಲಾಗಿದೆ.

ಪ್ರಕರಣದಲ್ಲಿ ಮೊದಲ ಆರೋಪಿ ಮತ್ತು ವಿನಯ್ ಕುಲಕರ್ಣಿ ಆಪ್ತನಾಗಿದ್ದ ಬಸವರಾಜ ಮುತ್ತಗಿ ಜನ ಪ್ರತಿನಿಧಿ ನ್ಯಾಯಾ ಲಯದಲ್ಲಿ ನೀಡಿರುವ ತಪ್ರೊಪ್ಪಿಗೆ ವಿನಯ್ ಕುಲಕರ್ಣಿ ಪಾತ್ರದ ಕುರಿತು ವಿಸ್ತ್ರತವಾಗಿ ಮಾಹಿತಿ ನೀಡಿದ್ದಾರೆ. ಈ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.

ಯೋಗೇಶ್ ಗೌಡ ಹತ್ಯೆಗೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸದಿದ್ದಾಗ ಬೆಂಗಳೂರಿನಿಂದ ಒಂದಷ್ಟು ಮಂದಿಯನ್ನು ಕರೆಸಿ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಹತ್ಯೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ತಪ್ರೊಪ್ಪಿಗೆ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಯೋಗೇಶ್ ಗೌಡ ಧಾರವಾಡ ಜಿ.ಪಂ. ಸದಸ್ಯರಾಗಿದ್ದನ್ನು ಸಹಿಸದ ವಿನಯ್ ಕುಲಕರ್ಣಿ ದ್ವೇಷ ಸಾಧಿಸಲಾರಂಭಿಸಿದರು. ಅವರ ಹತ್ಯೆಗೆ ಮೊದಲು ತಮಗೆ ಹೇಳಿದ್ದರು. 

ಈ ಬಗ್ಗೆ ತನಗೆ ಪರಿಚಯಸ್ಥ ಧಾರವಾಡದ ಹುಡುಗರಾದ ವಿಕಾಸ್ ಕಲಬುರಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ ಬಳ್ಳಾರಿ, ಸಂದೀಪ್ ಸವದತ್ತಿ, ಮಹಾಬಲೇಶ್ವರ ಅವರನ್ನು ಭೇಟಿಯಾಗಿ ವಿನಯ್ ಕುಲಕರ್ಣಿ ವಿಚಾರ ಪ್ರಸ್ತಾಪಿಸಲಾಯಿತು. ಆದರೆ ಅವರು ತಿರಸ್ಕರಿಸಿದರು. ಅದನ್ನು ವಿನಯ್ ಕುಲಕರ್ಣಿ ಅವರಿಗೆ ತಿಳಿಸಲಾಯಿತು. ಆದರೂ ಹತ್ಯೆಗೆ ತೀವ್ರ ಒತ್ತಡ ಹೇರಲಾಗಿದ್ದು, ಬೆಂಗಳೂರಿನಿಂದ ಯುವಕರನ್ನು ಕರೆಸಿಯಾದರೂ ಕೆಲಸ ಮಾಡಿಕೊಡುವಂತೆ ಕುಲಕರ್ಣಿ ಒತ್ತಾ ಯ ಮಾಡಿದ್ದರು ಎಂದು ಹೇಳಲಾಗಿದೆ

 

Related Articles

error: Content is protected !!