Home » ಗಾಂಜಾ ಆರೋಪಿಗೆ ಕಠಿನ ಸಜೆ
 

ಗಾಂಜಾ ಆರೋಪಿಗೆ ಕಠಿನ ಸಜೆ

by Kundapur Xpress
Spread the love

ಉಡುಪಿ: ಕಳೆದ ಏಳು ವರ್ಷದ ಹಿಂದೆ ದಾಖಲಾಗಿದ್ದ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಭಂದಿಸಿದಂತೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಪ್ಪನವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ಆರೋಪಿಗೆ  ಒಂದು ವರ್ಷ ಕಠಿಣ ಸಜೆ ಮತ್ತು 30,000 ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ಭೀಮಶಂಕರ ಅಳಗಿ ಶಿಕ್ಷೆಗೆ ಗುರಿಯಾದ ಆರೋಪಿ

ಪ್ರಕರಣದ ವಿವರ:

2016 ರ ಜು. 11 ರಂದು ಕೋಟ ಪೊಲೀಸ್ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರಾದ ಕಬ್ಬಾಳ ರಾಜ್ ತಮ್ಮ ಸಿಬ್ಬಂದಿಗಳ ಜೊತೆ ಉಡುಪಿ ತಾಲೂಕು ಚಿತ್ರವಾಡಿ ಗ್ರಾಮದ ಮಾರಿಯಮ್ಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಂದರ್ಭ ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದ ಭೀಮಶಂಕರ ಅಳಗಿಯನ್ನು ಅನುಮಾನದಿಂದ ವಿಚಾರಿಸಿದಾಗ ಚೀಲದಲ್ಲಿ 1 ಕೆ.ಜಿ 700 ಗ್ರಾಂ ಗಾಂಜಾ ಪತ್ತೆಯಾಗಿತ್ತು.

ಭೀಮಶಂಕರ ಕೋಟತಟ್ಟು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾನು ಕೋಟ ಮತ್ತು ಕುಂದಾಪುರ ಕಡೆಗಳಲ್ಲಿ ಗಾಂಜಾ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುವುದಾಗಿ ಪೊಲೀಸ್‌ ತನಿಖೆಯಲ್ಲಿ  ಆರೋಪ ಒಪ್ಪಿಕೊಂಡಿದ್ದ

ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಕೆ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು

   

Related Articles

error: Content is protected !!