Home Uncategorizedಅಂದರ್‌ ಬಾಹರ್‌ ಜುಗಾರಿ ಆಟ : ಪೊಲೀಸರ ದಾಳಿ ನಾಲ್ವರ ಬಂಧನ

ಅಂದರ್‌ ಬಾಹರ್‌ ಜುಗಾರಿ ಆಟ : ಪೊಲೀಸರ ದಾಳಿ ನಾಲ್ವರ ಬಂಧನ

by Kundapur Xpress

ಮಣಿಪಾಲ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಸಗ್ರಿ ನೋಳೆಯ ಪೆರಂಪಳ್ಳೀ ರಸ್ತೆಯ ಬದಿಯ ಹಾಡಿಯಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ದಿನಾಂಕ 03/05/2026ರಂದು ಸಂಜೆ ತಿಮ್ಮೇಶ್‌ ಬಿ.ಎನ್‌, ಪೊಲೀಸ್ ಉಪನಿರೀಕ್ಷಕರು (ಕಾ & ಸು), ಮಣಿಪಾಲ ಪೊಲೀಸ್ ಠಾಣೆ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸ್ಥಳದಲ್ಲಿ ಜನರು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್‌ ಎಲೆಗಳ ಸಹಾಯದಿಂದ ಅಂದರ್‌ ಬಾಹರ್‌ ಆಟ ಆಡುತ್ತಿರುವುದು ಪತ್ತೆಯಾಯಿತು.

ಬಂಧಿತ ಆರೋಪಿಗಳನ್ನು ರುದ್ರಯ್ಯ (37), ಅಂಬಾಗಿಲು, ಉಡುಪಿ ಕೃಷ್ಣ ಗಾಣಿಗ (46), ಉದ್ಯಾವರ ಗ್ರಾಮ, ಉಡುಪಿ ಸಿಂದೂರಪ್ಪ ಹಿರೇಮನಿ (47), ಪುತ್ತೂರು ಗ್ರಾಮ, ಉಡುಪಿ ಶರತ್ ಕುಮಾರ್ (28), 80 ಬಡಗುಬೆಟ್ಟು ಗ್ರಾಮ, ಉಡುಪಿ ಎಂದು ಗುರುತಿಸಲಾಗಿದೆ.

ಪೊಲೀಸರು ಸ್ಥಳದಿಂದ ₹10,800 ನಗದು, ಇಸ್ಪೀಟ್‌ ಎಲೆಗಳು, ಮೊಬೈಲ್‌ ಫೋನ್‌ಗಳು ಹಾಗೂ ನೀಲಿ ಬಣ್ಣದ ತಾಡಪಾಲನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles