331
ಕುಂದಾಪುರ : ಕುಂದಾಪುರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಶ್ರೀಯುತ ಕಿರಣ್ ಕುಮಾರ್ ಕೊಡ್ಗಿ ಅವರು ಭರ್ಜರಿಯಾಗಿ ಗೆಲುವನ್ನು ದಾಖಲಿಸಿದ್ದು ಸಂಜೆ ಬಿಜೆಪಿಯ ಕುಂದಾಪುರ ನಗರ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಶಂಕರ್ ಅಂಕದ ಕಟ್ಟೆ ಅವರು ಕಳೆದ ಒಂದು ತಿಂಗಳಿನಿಂದ ಬಿಜೆಪಿಯ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಬಿಜೆಪಿಯ ದೇವದುರ್ಲಭ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಯ ಕಾರ್ಯಕರ್ತರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ದುಡಿದ ಕಾರ್ಯಕರ್ತರಿಗೆ ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷರಾದ ಶಂಕರ್ ಅಂಕದ ಕಟ್ಟಿಯವರು ಕೃತಜ್ಞತೆ ಸಲ್ಲಿಸಿದ್ದಾರೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಕಿರಣ್ ಕೊಡ್ಗಿಯವರನ್ನು ಅಭಿನಂದಿಸಿ ಮಾತನಾಡಿ ಇಂದಿನ ಕಿರಣ್ ಕೊಡ್ಗಿಯವರ ಗೆಲುವು ಕಾರ್ಯಕರ್ತರ ಗೆಲುವಾಗಿದೆ ಎಂದರು

