Home Uncategorizedಹೋಟೇಲ್‌ ಉದ್ಯಮಿ : ಸುರೇಶ್‌ ಎಸ್. ಪೂಜಾರಿ ನಿಧನ

ಹೋಟೇಲ್‌ ಉದ್ಯಮಿ : ಸುರೇಶ್‌ ಎಸ್. ಪೂಜಾರಿ ನಿಧನ

by Kundapur Xpress

ಕುಂದಾಪುರ :ಹೋಟೆಲ್ ಸಾಮ್ರಾಜ್ಯದ ಅಧಿಪತಿ, ಕೊಡುಗೈ ದಾನಿ, ಶ್ರೀ ಸುರೇಶ್ ಎಸ್. ಪೂಜಾರಿ ಪಡುಕೋಣೆ ಅವರು ನಿನ್ನೆ ಸಂಜೆ 7:40 ಕ್ಕೆ ಮುಂಬೈಯಲ್ಲಿ ನಿಧನ ಹೊಂದಿದರು ಅವರಿಗೆ 87 ವರ್ಷ ವಯಸ್ಸಾಗಿತ್ತು

ಎಳೆಯ ವಯಸ್ಸಿನಲ್ಲೇ ಹುಟ್ಟೂರನ್ನು ತೊರೆದು ಮುಂಬಯಿಗೆ ತೆರಳಿ ತಮ್ಮ ಸ್ವ ಸಾಮರ್ಥ್ಯದಿಂದ ಸುಖ ಸಾಗರ ಗ್ರೂಪ್ ಆಪ್ ಹೋಟೆಲಿನ ಸಾಮ್ರಾಜ್ಯವನ್ನು ಕಟ್ಟಿ ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಮರ್ಪಿಸಿದ್ದಾರೆ

ಕೊಡುಗೈ ದಾನಿ ಸುರೇಶ್ ಎಸ್ ಪೂಜಾರಿಯವರು ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಗೌರವಾಧ್ಯಕ್ಷರು.ಶ್ರೀ ನಾರಾಯಣಗುರು ಏಜ್ಯುಕೇಶನಲ್&ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರು. 

Related Articles