ಅಂಕೋಲಾ : ತಾಲೂಕಿನ ಶಿರೂರು బಳಿ ಸಂಭವಿಸಿದ ಭೀಕರ ಭೂಕುಸಿತದ ಪ್ರದೇಶದಲ್ಲಿ ಬುಧವಾರ ಬೆಳಗ್ಗೆಯಿಂದ ಗುಡ್ಡದ ಮಣ್ಣು ತೆರವು ಮತ್ತು ಕಣ್ಮರೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದೆಯಾದರೂ ಸಂಜೆ ತನಕ ಯಾವುದೇ ಶವ ಪತ್ತೆಯಾಗಿಲ್ಲ. ಬೆಳಗಾವಿ ಮತ್ತು ಮಂಗಳೂರಿನಿಂದ ಆಗಮಿಸಿರುವ ಎಸ್ ಡಿಆರ್‌ಎಫ್‌ನ 2 ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.
ಮಂಗಳವಾರ ಮಧ್ಯಾಹ್ನದಿಂದ ಸತತವಾಗಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈಗಾಗಲೇ ನೂರಾರು ಲೋಡುಗಳಷ್ಟು ಮಣ್ಣು ತೆರುವುಗೊಳಿಸಲಾದರೂ ಭಾರೀ ಪ್ರಮಾಣ ದಲ್ಲಿ ಮಣ್ಣು ತೆಗೆಯಬೇಕಾಗಿರುವುದರಿಂದ ಇನ್ನೂ ಒಂದೆರಡು ದಿನ ಕಾರ್ಯಾ ಚರಣೆ ನಡೆಸಬೇಕಾಗ ಬಹುದು ಎಂದು ಹೇಳಲಾಗುತ್ತಿದೆ. ದುರ್ಘಟನೆಯಲ್ಲಿ ಮೃತಪಟ್ಟು ಗೋಕರ್ಣದ ದುಬ್ಬನಸಸಿ ಬಳಿ ಪತ್ತೆಯಾ ಗಿರುವ ಶಿರೂರಿನ ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ ಅವರ ಪತ್ನಿ ಶಾಂತಿ ನಾಯ್ಕ ಮತ್ತು ಅವರ ಮಗ ರೋಶನ ನಾಯ್ಕ ಅವರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರ ನಡೆಸಲಾಗಿದೆ
ಆರಂಭವಾಗದ ಸಂಚಾರ
ಹೆದ್ದಾರಿಯಲ್ಲಿ ಕುಸಿದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಿರಂತರವಾಗಿ ಸಾಗಿರುವ ಹಿನ್ನೆಲೆಯಲ್ಲಿ ಅಂಕೋಲಾ- ಕುಮಟಾ ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭವಾಗಿಲ್ಲ. ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಪೊಲೀಸರು ಬದಲಿ ಮಾರ್ಗದಿಂದ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲು ಹೆಣಗಾಡುತ್ತಿದ್ದಾರೆ