ಕುಂದಾಪುರ : ಕಾಶ್ಮೀರದಲ್ಲಿ ಹುತಾತ್ಮರಾದ ಬೀಜಾಡಿಯ ಯುವಕ ಅನೂಪ್ ಪೂಜಾರಿಯವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಹಾಗೂ ಕುಟುಂಬದವರು ಮನವಿ ಮಾಡಿದ್ದು, ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಮಾತನಾಡುವುದಾಗಿ ವಿಧಾನಸಭೆಯ ಸ್ವೀಕರ ಯು.ಟಿ. ಖಾದರ್ ಹೇಳಿದ್ದಾರೆ.
ಬೀಜಾಡಿ ಕೆಳಮನೆಯ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ಅವರು ಪತ್ನಿ ಮಂಜುಶ್ರೀ ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ದೇಶ ಕಾಯುವ ನಮ್ಮೂರ ಯುವಕನ ಅಕಾಲಿಕ ನಿಧನ ರಾಜ್ಯದ ಜನರಿಗೆ ತೀವ್ರವಾದ ನೋವನ್ನು ಉಂಟು ಮಾಡಿದೆ. ದುರಂತದಲ್ಲಿ ಮೃತರಾದ ರಾಜ್ಯದ ಎಲ್ಲಾ ಸೈನಿಕರ ಕುಟುಂಬದವರಿಗೂ ರಾಜ್ಯ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದು ಇದನ್ನು ಶೀಘ್ರವಾಗಿ ಅನೂಪ್ ಕುಟುಂಬದವರಿಗೂ ಒದಗಿಸಲು ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು, ಹುತಾತ್ಮ ಯೋಧನ ಹೆಸನಲ್ಲಿ ಸ್ಮಾರಕ ನಿರ್ಮಾಣವೂ ಸೇರಿದಂತೆ ಯಾವುದೇ ಕಾರ್ಯ ಕ್ರಮಗಳನ್ನು ರೂಪಿಸುವುದಿದ್ದರೂ, ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲಿ, ಸರ್ಕಾರದಿಂದ ಬೇಕಾದ ಸಹಕಾರ ನೀಡಲು ಬದ್ಧನಿರುವುದಾಗಿ ಅವರು ತಿಳಿಸಿದರು
ಅವರೊಂದಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕುಂದಾಪುರದ ಕಾಂಗ್ರೇಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಬೀಜಾಡಿ ಅಶೋಕ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು