ಕುಂದಪುರ: ಇಲ್ಲಿನ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟP,À ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ತ್ರಾಸಿ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರÀಯದಲ್ಲಿ “ಏಕ್ ತಾರಿಕ್ ಏಕ್ ಘಂಟಾ” ಶೀರ್ಷಿಕೆಯಡಿಯಲ್ಲಿ, ತ್ರಾಸಿ ಮರವಂತೆ ಕಡಲತೀರದಲ್ಲಿ ಬೀಚ್ ಸ್ವಚ್ಚತಾ ಕಾರ್ಯ ಹಾಗೂ ಪರಿಸರ ಮತ್ತು ಸ್ಚಚ್ಛತೆಯ ಕುರಿತು ಜಾಗ್ರತೆ ಮೂಡಿಸುವ ‘ಪರಿಸರ-ನಮಗೊಂದಿಷ್ಟು ಉಳಿಸಿ’ ಬೀದಿ ನಾಟಕವನ್ನು ನಡೆಸಿಕೊಡಲಾಯಿತು.
ಈ ಸಂದರ್ಭ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕರಿ ಶಶಿಧರ್ ಕೆ. ಜಿ., ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ತ್ರಾಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್, ತ್ರಾಸಿ ಗ್ರಾಮ ಪಂಚಾಯತ್ ಸಿಬ್ಬಂಧಿಗಳಾದ ಶಿವಾನಂದ ಎಮ್, ಸಂತೋಷ್, ಸಂದೀಪ್ ಪೂಜಾರಿ, ರಕ್ಷಿತ್ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ, ರೋವರ್ಸ್ ಲೀಡರ್ ಪ್ರವೀಣ್ ಮೊಗವೀರ ಗಂಗೊಳ್ಳಿ, ರೇಂಜರ್ಸ್ ಲೀಡರ್ ಅವಿತಾ ಕೊರೆಯಾ, ಕನ್ನಡ ಸಹ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ, ಎನ್.ಎಸ್.ಎಸ್ ಸಹಕರ್ಯಕ್ರಮಾದಿಕಾರಿ ದೀಪಾ ಪೂಜಾರಿ, ಕಛೇರಿ ಸಿಬ್ಭಂದಿ ರಾಮಕೃಷ್ಣ ಕಾಂತು, ಎನ್.ಎಸ್.ಎಸ್ ಪ್ರತಿನಿಧಿ ಶೃದ್ಧಾ, ಹಾಗೂ ನಶ್ಯಂತ್ ಉಪಸ್ಥಿತರಿದ್ದರು. 223 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.