ಬೆಂಗಳೂರು: ರಾಜ್ಯ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯು ಜುಲೈ 19 ರಿಂದ ಜಾರಿಯಾಗಲಿದೆ. ಈ ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಆಗಷ್ಟ್ 18ರಿಂದ ನೀಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಕುಟುಂಬ ಕಲ್ಯಾ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ವಿಚಾರ ತಿಳಿಸಿದರು. ಇದೇ ವೇಳೆ, ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ ಇಲ್ಲ ಎಂದು ಅವರು ಹೇಳಿದರು
ಸರ್ಕಾರಿ ಬಿಲ್ ಪಾವತಿ ಹಾಗೂ ಇತರ ಸೇವ ಕೇಂದ್ರಗಳಾದ ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳು ಹಾಗೂ ತಾಲೂಕು ಕಚೇರಿಗಳು, ನಾಡ ಕಚೇರಿಗಳಲ್ಲಿ ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು. ಅರ್ಜಿದಾರರು ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ತೆರಿಗೆದಾರರಲ್ಲದ ಹಾಗೂ ಜಿಎಸ್ ಟಿ ಪಾವತಿಸದವರಿಗೆ ಮಾತ್ರ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ