Home » ಶ್ರೀ ಕ್ಷೇತ್ರ ಮಾರಣಕಟ್ಟೆ
 

ಶ್ರೀ ಕ್ಷೇತ್ರ ಮಾರಣಕಟ್ಟೆ

by Kundapur Xpress
Spread the love

ಮಾರಣಕಟ್ಟೆ ಇದು ಕರಾವಳಿ ಭಾಗದಲ್ಲಿರುವಂತಹ ಅತ್ಯಂತ ಪ್ರಸಿದ್ಧ ದೇವಸ್ಥಾನ. ಮಾರಣಕಟ್ಟೆ ಎಂಬ ದೇವಸ್ಥಾನದ ಹೆಸರನ್ನು ಕೇಳಿದಾಗಲೇ ಇಲ್ಲಿಯ ಜನರಲ್ಲಿ ಭಯ ಭಕ್ತಿಗಳು ಜಾಗೃತವಾಗುತ್ತದೆ. ಮೂಕಾಸುರ ಎಂಬ ರಾಕ್ಷಸನು ತನ್ನ ರಾಕ್ಷಸ ಗುಣವನ್ನು ಕಳೆದು ದೇವ ಗುಣವನ್ನು ಪಡೆದಂತಹ ಕ್ಷೇತ್ರವಿದು. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವಂತಹ ತಾಣವಿದು. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಿಂದ
ಎಂಟು ಮೈಲಿ ದೂರದಲ್ಲಿದೆ ಈ ಮಾರಣಕಟ್ಟೆ ಕ್ಷೇತ್ರ. ಕುಂದಾಪುರದಿಂದ 25 ಕಿ.ಮೀ. ಉಡುಪಿಯಿಂದ 60 ಕಿ.ಮೀ. ದೂರದಲ್ಲಿದೆ ಈ ಮಾರಣಕಟ್ಟೆ ದೇವಸ್ಥಾನದ ತಾಣ. ಆದಿಶಕ್ತಿ ಭ್ರಷ್ಟರನ್ನು ಶಿಕ್ಷಿಸೋಕೆ ಎತ್ತಿದ ಅವತಾರಗಳಿಗೆ ಲೆಕ್ಕವಿಲ್ಲ. ಕೊಲ್ಲೂರಲ್ಲಿ ಮೂಕಾಂಬಿಕೆಯಾಗಿ
ಶೃಂಗೇರಿಯಲ್ಲಿ ಶಾರದಾಂಬೆಯಾಗಿ , ಉಡುಪಿಯಲ್ಲಿ ಶಾಂತದುರ್ಗೆಯಾಗಿ ಭಕ್ತರನ್ನು ಸದಾ ಆಶೀರ್ವದಿಸುತ್ತಾಳೆ. ದೇವಿಯ ಅನುಗ್ರಹವನ್ನು ಪಡೆದ ಮೂಕಾಸುರನು ಬ್ರಹ್ಮಲಿಂಗನಾಗಿ ನೆಲೆ ನಿಂತ ಸ್ಥಳವೇ ಮಾರಣಕಟ್ಟೆ. ಮೂಕಾಂಬಿಕೆ ಮೂಕಾಸುರನನ್ನು
ಸಂಹಾರ ಮಾಡಿದರಿಂದ ಈ ಕ್ಷೇತ್ರಕ್ಕೆ ಮಾರಣಕಟ್ಟೆ ಎಂಬ ಹೆಸರು ಬಂದಿದೆ ಎಂದು ಉಲ್ಲೇಖವಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಬ್ರಹ್ಮಲಿಂಗೇಶ್ವರನು ನೆಲೆ ನಿಂತಿದ್ದಾನೆ. ಬ್ರಹ್ಮಲಿಂಗೇಶ್ವರನ ಮೂರ್ತಿಯನ್ನು ಅಲಂಕಾರದಲ್ಲಿ ರಂಗಪೂಜೆ ಸಮಯದಲ್ಲಿ ನೋಡುವುದೇ ಚೆಂದ. ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀ ಚಕ್ರವು ಇಲ್ಲಿದೆ. ಇಲ್ಲಿ ಸಣ್ಣದಾದ ಬ್ರಹ್ಮಕುಂಡ ಒಂದಿದೆ. ಬ್ರಹ್ಮಕುಂಡದಲ್ಲಿದ್ದ ನೀರು ತಲೆಗೆ ಪ್ರೋಕ್ಷಣೆಯನ್ನು ಮಾಡುವುದರಿಂದ ಭಕ್ತರ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಅನೇಕರು ಹೇಳುತ್ತಾರೆ. ಮೂಕಾಸುರನ ಉಪಟಳ ಭೂಮಿಯಲ್ಲಿ ಜಾಸ್ತಿಯಾದಾಗ ಎಲ್ಲಾ ದೇವತೆಗಳು ಸೇರಿ ಮೂಕಾಂಬಿಕೆಯಲ್ಲಿ ಪ್ರಾರ್ಥಿಸಲಾಗಿ ಮೂಕಾಂಬಿಕೆ ಮೂಕಾಸುರನನ್ನು ವಧಿಸಲು ಬಂದಾಗ ಮೂಕಾಸುರನಿಗೆ ತನ್ನ ತಪ್ಪಿನ ಅರಿವಾಗಿ ಮೂಕಾಂಬಿಕೆಯಲ್ಲಿ ನಿನಗೆ ಸೇವೆ ಮಾಡುವ ಭಾಗ್ಯ ನನಗೆ ಎಂದಿಗೂ ಲಭ್ಯವಾಗಲಿ ಎಂಬ ವರವನ್ನು ಕೇಳಿದಾಗ ನೀನು ಬ್ರಹ್ಮಲಿಂಗೇಶ್ವರನಾಗಿ ಈ ಮಾರಣಕಟ್ಟೆ ಕ್ಷೇತ್ರದಲ್ಲಿ ಇಲ್ಲಿಗೆ ಬರುವ ಭಕ್ತರನ್ನು ಆಶೀರ್ವದಿಸಿ ನನ್ನ ಕ್ಷೇತ್ರದಲ್ಲಿ ನೆಲೆ ನಿಲ್ಲು ಎಂದು
ಹರಸಿದಳು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಶಕ್ತಿ ಅಪಾರ. ಇಲ್ಲಿಗೆ ಬರುವಂತಹ ಭಕ್ತರ ತನ್ನ ಮನಸ್ಸಿನಲ್ಲಿದ್ದ ನೋವುಗಳನ್ನು ಪರಿಹಾರ ಮಾಡಿದಂತಹ ಅನೇಕ ಉದಾಹರಣೆಗಳು ಇಲ್ಲಿವೆ. ಬ್ರಹ್ಮಲಿಂಗೇಶ್ವರನಿಗೆ ರಂಗ ಪೂಜೆ ಮತ್ತು ಯಕ್ಷಗಾನ ಬಯಲಾಟ ಎಂದರೆ ಅತ್ಯಂತ ಪ್ರಿಯವಾದವು .ಅನೇಕ ಭಕ್ತರು ಬ್ರಹ್ಮಲಿಂಗೇಶ್ವರನಿಗೆ ರಂಗಪೂಜೆ ಮತ್ತು ಯಕ್ಷಗಾನ ಬಯಲಾಟವನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ದಿನದಲ್ಲಿ ಅತ್ಯಧಿಕ ರಂಗ ಪೂಜೆ ಆಗುವಂತಹ ದೇವಾಲಯ ಅಂದರೆ ಮಾರಣಕಟ್ಟೆ ಎಂದರೆ ತಪ್ಪಾಗಲಾರದು. ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಹೂವು ಎಂದರೆ ತುಂಬಾ ಪ್ರಿಯವಂತೆ. ಸೇವಂತಿಗೆ ಹೂವಿನ ಅಲಂಕಾರದಲ್ಲಿ ಬ್ರಹ್ಮಲಿಂಗೇಶ್ವರನನ್ನು ನೋಡುವುದೇ ಒಂದು ಚೆಂದ. ಇಂತಹ ಪವಾಡ ಕ್ಷೇತ್ರ ಎಲ್ಲಾ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ 

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!