ಕುಂದಾಪುರ: ಅಕ್ಟೋಬರ್ ೨ ರಂದು ಇಲ್ಲಿನ ಕುಂದಾಪುರ ಪುರಸಭಾ ವ್ಯಾಪ್ತಿಯ ಕೇಂದ್ರ ವಾರ್ಡ್‌ನಲ್ಲಿ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆದ ಪ್ರಯುಕ್ತ ಸಮಾಜಮುಖಿ ಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮ ನಡೆಯಿತು
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ವಾರ್ಡ್‌ನ ಸದಸ್ಯರಾದ ಮೋಹನ ದಾಸ್ ಶೆಣೈ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ರಾಜೇಶ್ ಕಾವೇರಿ , ಹಲ್ಸನಾಡು ಬಟ್ಟೆ ಮಳಿಗೆಯ ಮಾಲಕರಾದ ಕಾರ್ತಿಕೇಯ ಹಲ್ಸನಾಡು, ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕರಾದ ಡಾ.ಗಾಯತ್ರಿ ಪೈ, ಶಶಿಕಾಂತ್ ಹತ್ವಾರ್, ವೈಷ್ಣವಿ, ಮೇಘನಾ, ಸಹನಾ ಮತ್ತು ಬೋಧಕೇತರ ಸಿಬ್ಬಂದಿಗಳಾದ ಭವ್ಯಾ, ಸಾಕು, ಮತ್ತು ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಉಪನ್ಯಾಸಕರು ಸ್ವಚ್ಛತಾ ಕಾರ್ಯ ನಿರ್ವಹಿಸುವುದರೊಂದಿಗೆ ಮನೆಮನೆಗೆ ತೆರಳಿ ಆರೋಗ್ಯ, ಸ್ವಚ್ಛತೆ, ನೀರಿನ ಸಂರಕ್ಷಣೆ ಮತ್ತು ವಿಧಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.