Home » ಕೋಟ ಅಮೃತೇಶ್ವರ ವರಮಹಾಲಕ್ಷ್ಮೀ ಪೂಜೆ
 

ಕೋಟ ಅಮೃತೇಶ್ವರ ವರಮಹಾಲಕ್ಷ್ಮೀ ಪೂಜೆ

by Kundapur Xpress
Spread the love

ಕೋಟ: ಇಲ್ಲಿನ ಪುರಾಣ ಪ್ರಸಿದ್ಧ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಾರ್ಷಿಕ ವರಮಹಾಲಕ್ಮೀ ಪೂಜೆಯ ಅಂಗವಾಗಿ ಹಮ್ಮಿಕೊಂಡ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಸಾಗರ ಹರಿದು ಬಂತು.
ಶ್ರೀ ದೇವಿಗೆ ವಿಶೇಷ ಪುಷ್ಭಾಲಂಕಾರ ಸಹಿತ ವಿವಿಧ ಸೇವೆಗಳು ಜರಗಿದವು.
ದೇಗುಲದ ಸಭಾಂಗಣದಲ್ಲಿ ಸರಕಾರಿ ನಿಯಮಾನುಸಾರ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ವೇ.ಮೂ.ಮಧಸೂಧನ ಬಾಯರಿ ನೇತೃತ್ವದಲ್ಲಿ ಸಹಸ್ರ ಕುಂಕುಮಾರ್ಚನೆ ಸಹಿತ ವಿವಿಧ ಪೂಜಾ ಕಾರ್ಯಗಳು ನಡೆಯಿತು.
ಸಾವಿರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಮಹಾಅನ್ನಸಂತರ್ಪಣೆ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡರು.

ಭಕ್ತರ ಮಹಾಪೂರ ಶ್ರೀ ದೇವಳದಲ್ಲಿ ಮೊದಲ ಶ್ರಾವಣ ಶುಕ್ರವಾದ ಒಂದೆಡೆಯಾದರೆ ಸಂಕ್ರಾತಿ ಉತ್ಸವ ಭಕ್ತ ಸಮೂಹ ಹೆಚ್ಚಾಗಿ ಕಂಡುಬಂತು.

ಆಡಳಿತಾಧಿಕಾರಿ ಭಾಗಿ ಶ್ರೀ ದೇಗುಲದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತಾಧಿಕಾರಿ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಕುಟುಂಬ ಸಹಿತ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾಯಿತು.
ದೇಗುಲದ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್ ಹಾಗೂ ಮಾಜಿ ಟ್ರಸ್ಟಿಗಳು,ಜನತಾ ಸಂಸ್ಥೆಯ ಸಿಬ್ಬಂದಿಗಳು ಸ್ವಯಂಸೇವಕರಾಗಿ ಭಾಗಿಯಾದರು.

ಕೋಟ ಅಮೃತೇಶ್ವರ ವರಮಹಾಲಕ್ಷ್ಮೀ ಪೂಜೆಗೆ ಭಕ್ತಸಾಗರ,ಸಹಸ್ರ ಕುಂಕುಮಾರ್ಚನೆ , ಶ್ರೀ ದೇವಿಗೆ ವಿಶೇಷ ಪುಷ್ಭಾಲಂಕಾರ ಸಹಿತ ವಿವಿಧ ಸೇವೆಗಳು ಜರಗಿದವು. ಶ್ರೀ ದೇಗುಲದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತಾಧಿಕಾರಿ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಕುಟುಂಬ ಸಹಿತ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾಯಿತು.

   

Related Articles

error: Content is protected !!