Home » ಲವ್‌ ಜಿಹಾದ್‌ ಕರಾವಳಿಯ ಗಂಭೀರ ಸಮಸ್ಯೆ-ತೇಜಸ್ವಿನಿ ಗೌಡ
 

ಲವ್‌ ಜಿಹಾದ್‌ ಕರಾವಳಿಯ ಗಂಭೀರ ಸಮಸ್ಯೆ-ತೇಜಸ್ವಿನಿ ಗೌಡ

by Kundapur Xpress
Spread the love

ಲವ್‌ ಜಿಹಾದ್‌ ಕರಾವಳಿಯ ಗಂಭೀರ ಸಮಸ್ಯೆ-ತೇಜಸ್ವಿನಿ ಗೌಡ

ಮಂಗಳೂರು:ಕರಾವಳಿ ಭಾಗದಲ್ಲಿ ಲವ್‌ ಜಿಹಾದ್‌ ಗಂಭೀರ ಸಮಸ್ಯೆಯಾಗಿದ್ದು ತಾಯಂದಿರು ತಮ್ಮ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ವಹಿಸುವ ಮೂಲಕ ಲವ್‌ ಜಿಹಾದ್‌ ಗೆ ಕಡಿವಾಣ ಹಾಕಬೇಕಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯರಾದ ತೇಜಸ್ವಿನಿ ಗೌಡ ಹೇಳಿದರು

ಬಿಜೆಪಿ  ಮಂಗಳೂರು ನಗರದ ದಕ್ಷಿಣ ಮಂಡಲದ ವತಿಯಿಂದ ಶಾಸಕ ಡಿ ವೇದವ್ಯಾಸ ಕಾಮತ್‌ ಸಾರಥ್ಯದಲ್ಲಿ ನಗರದ ಟಿ ವಿ ರಮಣ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಬೃಹತ್‌ ಮಹಿಳಾ ಸಮಾವೇಶದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು ಕರಾವಳಿ ಭಾಗ ಕೇರಳದ ಗಡಿಯಲ್ಲಿದ್ದು ಜೊತೆಗೆ ಆಂಧ್ರಪ್ರದೇಶದಿಂದ ಇಲ್ಲಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿದೆ ಕೇರಳದಿಂದ ಐಸಿಸ್‌ನ ಸಂಪರ್ಕ ಸಾಧಿಸಲಾಗುತ್ತಿದೆ ಹಿಂದು ಹುಡುಗಿಯರನ್ನು ಲವ್‌ ಜಿಹಾದ್‌ ಬಲೆಗೆ ಬೀಳಿಸಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಾರೆ ಈ ಬಗ್ಗೆ ಮಾತೆಯಂದಿರು ಎಚ್ಚರಿಕೆಯಿಂದಿದ್ದು ರಾಷ್ಟ್ರದ್ರೋಹ ಹಾಗೂ ಅತ್ಯಾಚಾರದಂತಹ ಕೃತ್ಯಗಳಿಗೆ ಬಾಯಲ್ಲಿ ಉತ್ತರ ಹೇಳುವ ಕಾಲ ಹೋಗಿದ್ದು ಈಗ ಕೃತಿಯಲ್ಲಿ ಉತ್ತರ ಹೇಳಲಾಗುತ್ತಿದೆ ಎಂದರು

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ ಮಹಿಳಾ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ಮಹಿಳಾ ಪರ ಯೋಜನೆ ಹಾಗೂ ಕೊಡುಗೆಗಳನ್ನು ಜನಮಾನಸಕ್ಕೆ ತಲುಪಿಸಿ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನವನ್ನು ಬಿಜೆಪಿ ಗೆಲ್ಲಬೇಕು ಎಂದರು

ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ವಿಧಾನ‌ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್‌ ಉಪಮೇಯರ್‌ ಪೂರ್ಣಿಮಾ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷೀ ಗಟ್ಟಿ ಚುನಾವಣಾ ಪ್ರಭಾರಿ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು

   

Related Articles

error: Content is protected !!