Home » ಪ್ರಿಯತಮೆಯನ್ನೇ ಕೊಂದ ಆರೋಪಿಗೆ ಜೀವಾವಧಿ
 

ಪ್ರಿಯತಮೆಯನ್ನೇ ಕೊಂದ ಆರೋಪಿಗೆ ಜೀವಾವಧಿ

by Kundapur Xpress
Spread the love

ಮಂಗಳೂರು : ಪ್ರಿಯತಮೆಯನ್ನು ಕೊಲೆ ಮಾಡಿದ ಅಪರಾಧಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಬೆನಕೊಟ್ಟಿ ತಾಂಡಾ ನಿವಾಸಿ ಅಪರಾಧಿ ಸಂದೀಪ್ ರಾಥೋಡ್ (23ವರ್ಷ)

ಸಂದೀಪ್ ರಾಥೋಡ್ ಮತ್ತು ಮೃತ ಯುವತಿ ಅಂಜನಾ ವಷಿಷ್ಠಾ 2018ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಸಂದೀಪ್ ರಾಥೋಡ್ ಪೊಲೀಸ್ ಎಸ್‌ಐ ಹುದ್ದೆಯ ಲಿಖಿತ ಪರೀಕ್ಷೆಯ ಪೂರ್ವ ತಯಾರಿಗೆ ಮಂಗಳೂರಿಗೆ ಬಂದಿದ್ದು, ಅತ್ತಾವರ 6ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಅಂಜನಾಳ ಮನೆಯಲ್ಲಿ ಉಳಿದುಕೊಂಡಿದ್ದ. ಮಾಲೀಕರಿಗೆ ಮನೆಯ ತಾವಿಬ್ಬರೂ ದಂಪತಿಯೆಂದು ನಂಬಿಸಿದ್ದರು.

ಈ ನಡುವೆ ಅಂಜನಾ ಮನೆಯವರು ಬೇರೆ ಹುಡುಗ ಹುಡುಕಿದ್ದು, ಈಕೆಯೂ ಒಪ್ಪಿಕೊಂಡಿದ್ದಳು. ಈ ವಿಚಾರವನ್ನು ಸಂದೀಪ್ ರಾಥೋಡ್ ಗೆ ತಿಳಿಸಿ ತನ್ನ ಮರೆತು ಬಿಡುವಂತೆ ಹೇಳಿದ್ದಳು. ಇದರಿಂದ ಸಿಟ್ಟುಗೊಂಡು ಆರೋಪಿ ಆಕೆಯನ್ನು 2019 ಜೂ.7ರಂದು ಟಿವಿ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ, ಹೋಗುವಾಗ ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಮಾಡಿದ್ದ ವಿಜಯಪುರ ಸಿಂದಗಿಯ ಹೊಟೇಲಿಂದ ಪೊಲೀಸರು ಆತನನ್ನು ಬಂಧಿಸಿದ್ದರು. ಪಾಂಡೇಶ್ವರ ಠಾಣೆಯ ಆಗಿನ ಪಿಎಸ್‌ಐ ರಾಜೇಂದ್ರ ಬಿ. ಹಾಗೂ ಇನ್‌ಸ್ಪೆಕ್ಟರ್ ಆರಾಧ್ಯ ಎಂ.ಕುಮಾರ್  ಪ್ರಮುಖ ತನಿಖೆ ನಡೆಸಿ, ಇನ್‌ಸ್ಪೆಕ್ಟರ್ ಲೋಕೇಶ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನ್ಯಾಯಾಲಯವು ನಡೆಸಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ.ಶೇಖ‌ರ್ ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ವಾ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ಮಂಡಿಸಿದ್ದರು.

   

Related Articles

error: Content is protected !!