135
ಕುಂದಾಪುರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರು ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಗೆ 56,600/- ರೂಪಾಯಿಯ ಔಷಧ ಗಳನ್ನು ಉಚಿತವಾಗಿ ನೀಡಿದರು. ಇದನ್ನು ಆಯುಷ್ ಆಸ್ಪತ್ರೆಯ ವೈದ್ಯರಾದ ಅಶೋಕ್ ಎಚ್. ಇವರಿಗೆ ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿಯವರು ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸದಾನಂದ ಶೆಟ್ಟಿ ಮತ್ತು ಬಿ. ಎಮ್. ಚಂದ್ರಶೇಖರ್ ಹಾಗೂ ಆಸ್ಪತ್ರೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು