ತಂತ್ರಜ್ಞಾನವೆಂಬ ವಿಜ್ಞಾನದಿಂದ ನಾವು ಗಳಿಸಿಕೊಂಡದ್ದಕ್ಕಿಂತ ಕಳೆದುಕೊಂಡಿದ್ದೆ ಜಾಸ್ತಿ.
ಮೊಬೈಲ್ ಎಂಬುದು ಎಲ್ಲರಿಗೂ ಅತ್ಯಂತ ಪ್ರಿಯವಾದ ಸಾಧನ. ಒಂದು ಸಲ ಮೊಬೈಲನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡು ಕುಳಿತುಕೊಂಡರೆ ಸಾಕು ನಮಗೆ ನಮ್ಮ ಅಕ್ಕ ಪಕ್ಕದಲ್ಲಿ ಏನಾಗುತ್ತಿದೆ ಎಂಬುದರ ಜ್ಞಾನವೇ ಇರುವುದಿಲ್ಲ.ಮಕ್ಕಳು ಅಳುತ್ತಾ ಕುಳಿತಿದ್ದರೆ ಮೊಬೈಲ್ ಅನ್ನು ಅವರ ಕೈಗೆ ಕೊಟ್ಟುಬಿಟ್ಟರೆ ಸಾಕು ಮಗು ಅಳುವುದನ್ನು ನಿಲ್ಲಿಸಿ ಬಿಡುತ್ತದೆ. ನೀವೆಂದಾದರೂ ಹಿಂದಿನ ಜೀವನಶೈಲಿಯನ್ನು ಯೋಚಿಸಿಕೊಂಡಿದ್ದೀರಾ. ನಾವು ಎಷ್ಟೇ ದೂರ ಪ್ರಯಾಣ ಮಾಡುತ್ತಿದ್ದರು ಮೊಬೈಲ್ ಇಲ್ಲದ ಸಮಯದಲ್ಲಿ ದೂರ ದೂರದ ಊರುಗಳಿಗೆ ಹೋಗಿ ಕ್ಷೇಮವಾಗಿ ವಾಪಸ್ ಬಂದಂತಹ ಕಾಲವು ಇದೆ. ಆಗ ಶ್ರೀಮಂತರ ಮನೆಯಲ್ಲಿ ಟೆಲಿಫೋನ್ ಗಳು ಮಾತ್ರ ಇರುವಂತಹ ಕಾಲ. ದೂರದ ಸಂಬಂಧಿಗಳನ್ನು ಸಂಪರ್ಕಿಸಿಕೊಬೇಕಾದರೆ ಪತ್ರ ಒಂದೇ ಅದರ ದಾರಿಯಾಗಿತ್ತು. ದೂರದ ಸಂಬಂಧಿಗಳು ನಮ್ಮ ಮನೆಗೆ ಬಂದರೆ ಎಲ್ಲಿಲ್ಲದ ಸಂಭ್ರಮ ಸಡಗರ. ಎಲ್ಲರೂ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಗಂಟೆಗಟ್ಟಲೆ ಮಾತಾಡುತ್ತಾ ಕುಳಿತರೆ ಸಮಯ ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ. ಮೊಬೈಲ್ ಬಂತು ನಂತರ ಇಂತಹ ಸಣ್ಣ ಸಣ್ಣ ಸಂತೋಷಗಳು ಸಂಭ್ರಮಗಳು ನಮ್ಮಿಂದ ದೂರವಾಗಿವೆ. ಈಗ ನಾವು ಯಾರದಾದರೂ ಮನೆಗೆ ಹೋಗಬೇಕೆಂದರೆ ಅವರಿಗೆ ಕರೆ ಮಾಡಿ ತಿಳಿಸಿ ಹೋಗಬೇಕಾಗುತ್ತದೆ ಇನ್ನೆಲ್ಲಿಯ ಸಂಭ್ರಮ. ಅವಿಭಕ್ತ ಕುಟುಂಬಗಳು ಹೇಳ ಹೆಸರಿಲ್ಲದಂತಾಗಿ ಕುಟುಂಬದ ವ್ಯಾಖ್ಯಾನವು ಒಬ್ಬರಿಗೂ ಇಬ್ಬರಿಗೂ ಮೂವರು ಎಂತಾಗಿದೆ. ನಾವು ಚಿಕ್ಕನಿಂದ ಇದ್ದಂತಹ ಮಕ್ಕಳ ಆಟಗಳಾದ ಚಿನ್ನಿದಾಂಡು ಕುಂಟೆಬಿಲ್ಲೆ , ಕಬಡ್ಡಿ ,ಲಗೋರಿ ಅಂತಹ ಸುಂದರವಾದಂತ ಆಟಗಳು ಮೊಬೈಲ್ ಬಂದಮೇಲೆ ಹೇಳ ಹೆಸರಿಲ್ಲದಂತಾಗಿದೆ. ಮಕ್ಕಳ ಬಾಲ್ಯತನ ಮೊಬೈಲ್ ಎಂಬ ಮಹಾ ತಂತ್ರಜ್ಞಾನದಲ್ಲಿ ಮುಳುಗಿರುತ್ತದೆ. ನಾವು ಚಿಕ್ಕದಿದ್ದಾಗ ಇದ್ದಂತಹ ಈಗ ಪತ್ರಿಕೆಗಳಾದ ಸುಧಾ, ತರಂಗ ,ಮಯೂರ ,ತುಷಾರ ಮುಂತಾದ ಪತ್ರಿಕೆಗಳನ್ನು ಓದುವ ಜನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಹಬ್ಬ ಹರಿ ದಿನಗಳು ಮನೆಯಲ್ಲಿದ್ದ ಸಂಭ್ರಮ ಎಲ್ಲವೂ ನೆಲಕಚ್ಚಿ ಹೋಗಿದೆ. ಈಗ ಹೇಳಿ ತಂತ್ರಜ್ಞಾನ ನಮಗೆ ಕೊಟ್ಟಿದ್ದಾದರೂ ಏನು…?
ಪ್ರದೀಪ್,ಚಿನ್ಮಯಿ ಆಸ್ಪತ್ರೆ ಕುಂದಾಪುರ.