Home » ರಣ ಚಂಡಿ ಓನಕೆ ಓಬವ್ವ
 

ರಣ ಚಂಡಿ ಓನಕೆ ಓಬವ್ವ

by Kundapur Xpress
Spread the love

ಹೈದರಾಲಿಗೆ ದುಸ್ವಪ್ನವಾಗಿ ಕಾಡಿದ ಕನ್ನಡ ನಾಡಿನ ವೀರ ವನಿತೆ ಜನ ಮಾನಸದಲ್ಲಿ ಅಚ್ಚೊತ್ತಿ ನಿಂತು ಅಮರಳಾದ ರಣ ಚಂಡಿ ಓನಕೆ ಓಬವ್ವ  ಚಿತ್ರದುರ್ಗ ಎಂದೊಡನೆ ತಕ್ಷಣ ಕಣ್ಣ ಮುಂದೆ ಒನಕೆ ಹಿಡಿದು ನಿಂತ ತಾಯಿ ಓಬವ್ವ, ಕಣ್ಮನಗಳ ತುಂಬಿ ಮೈ ಮನ ರೋಮಾಂಚನಗೊಳ್ಳಲಿಲ್ಲ ಅಂದರೆ ನಮಗೆ ಭಾವನೆಗಳೇ ಇಲ್ಲ ಅಂತಲ್ಲವೇ….ಅಭ್ಬಾ!!!! ಕಾವಲುಗಾರನ ಮಡದಿ…ಅದೆಂತ ದೇಶಪ್ರೇಮ!! ಗಾಳಿ ಬೀಸಿದರೆ ದೊಡ್ಡ ಮರಕ್ಕೆ ನಾವೇನು ಮಾಡೋದು ನಾವು ಮರದ ಕೆಳಗಿರುವ ತರಗೆಲೆಗಳು. ಅಂತ ಸುಮ್ಮನಿದ್ದು ಅಥವಾ ಭಯದಿಂದ ಕುಳಿತಿದ್ದರೆ ಅಂದು ಚಿತ್ರದುರ್ಗದ ಕೋಟೆ ಹೈದರಾಲಿಯ ವಶವಾಗುತ್ತಿತ್ತು ಸಿಡಿಲಿಗೂ ಬೆಚ್ಚದ ಚಿತ್ರದುರ್ಗದ ಉಕ್ಕಿನ ಕೋಟೆ ಎಂತಹ ರೋಚಕ ಕತೆ

ಪತಿಗೆ ಊಟಕ್ಕೆ ನೀರು ತರಲೆಂದು ಕೊಳದ ಸಮೀಪದಲ್ಲಿ ಬರಲು, ಹೈದರನ ಸೈನಿಕರ ಪಿಸುಮಾತು ಕೇಳಿದ ತಕ್ಷಣ ಜಾಗ್ರತಳಾದ ಮಹಾತಾಯಿ ಓಬವ್ವ ಶಸ್ತ್ರಾಸ್ತ್ರ ಹುಡುಕುತ್ತ ಕುಳಿತಿದ್ದರೆ ಆಗುತಿತ್ತೆ ಕೈಗೆ ಸಿಕ್ಕ ನಕೆ ಹಿಡಿದು ಗುಪ್ತ ದ್ವಾರದೊಳಗೆ ನುಸುಳಿ ಬರುತ್ತಿದ್ದ ವೈರಿ ಪಡೆಯನ್ನ ನಿಃಷ್ಯೇಶ ಮಾಡಿ ರಣಚಂಡಿಯಂತೇ  ವೀರಗಚ್ಚೆಯನ್ನ ಹಾಕಿ ನಿಂತ ದ್ರಶ್ಯವನ್ನ ನೋಡಿದ ಪತಿಯು ಆ ಘಳಿಗೆಯಲ್ಲಿ ರಣ ಕಹಳೆಯನ್ನ ಊದಿ ದುರ್ಗದ ಸೈನಿಕರಿಗೆ ಬಂದೊದಗಿದ ಅಪಾಯವನ್ನ ಸೂಚಿಸಿದನು.ಆದರೆ ಅಷ್ಟರಲ್ಲಾಗಲೇ ಹಿಂಬದಿಯಿಂದ ಬಂದ ವೈರಿಯೊಬ್ಬ ಓಬವ್ವಳನ್ನ ಇರಿದು ಕೊಂದನು ಹೀಗೆ ದೇಶ ಸೇವೆಯೇ ಈಶ ಸೇವೆಯೆಂದು ತನ್ನ ಅಮೂಲ್ಯ ಜೀವವನ್ನ ಮುಡಿಪಾಗಿಟ್ಟು ಕೋಟೆಯನ್ನ ಕಾಯ್ದ ಮಹಾತಾಯಿ ಎಲ್ಲರಿಗೂ ಮಾದರಿಯಾದ ಕರುಣಾಮಯಿ, ವೀರ ನಾರಿ ಓನಕೆ ಓಬವ್ವಳ ಚರಿತ್ರೆ ಸದಾ ಪ್ರಾತಃ ಸ್ಮರಣೀಯ  77ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮದ ಹೊಸ್ತಿಲಲ್ಲಿರುವ ನಾವು ದೇಶಕ್ಕಾಗಿ ಪ್ರಾಣತೆತ್ತ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಸ್ವರ್ಣಾನಂದ,ಕುಂದಾಪುರ

   

Related Articles

error: Content is protected !!