Home » ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ
 

ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ

by Kundapur Xpress
Spread the love

ಕಾರ್ಕಳ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ ( ಪಿಎಂ ಸ್ವ_ನಿಧಿ)ಯೋಜನೆಯಡಿಯಲ್ಲಿ ಹಾಲು ಮಾರಾಟ ಮತ್ತು ಹಂಚಿಕೆ ಮಾಡುವವರನ್ನು ಬೀದಿ ಬದಿ ವ್ಯಾಪಾರಿಗಳೆಂದು ಪರಿಗಣಿಸಿ ಈ ಯೋಜನೆಯ ವ್ಯಾಪ್ತಿಗೆ ತಂದಿರುವುದು ದೇಶದ ಕೋಟ್ಯಂತರ ಮಂದಿಗೆ ಜೀವನೋಪಾಯವಾಗಿರುವ ಮನೆ ಮನೆಗೆ ಹಾಲು ಹಾಕುವವರಿಗೆ ಆರ್ಥಿಕ ಚೈತನ್ಯವನ್ನು ನೀಡಿದಂತಾಗಿದೆ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಸಂತಸ ವ್ಯಕ್ತಪಡಿಸಿರುತ್ತಾರೆ.

ಕರ್ನಾಟಕ ಹಾಲು ಮಹಾ ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ 15 ಒಕ್ಕೂಟಗಳ ಕೆಎಂಎಫ್ ಮಳಿಗೆಗಳು, ಫ್ರಾಂಚೈಸಿ, ಡೀಲರ್ ಗಳು, ನಂದಿನಿ ಹಾಲು ಮಾರಾಟಗಾರರು, ದಿನಂಪ್ರತಿ ಮನೆಮನೆಗೆ ಹಾಲು ವಿತರಿಸುವವರು ಕೆಎಂಎಫ್ ನಡಿ ನೋಂದಾಯಿಸಿ ಗುರುತು ಪತ್ರ ಪಡೆದಿರುವ ಅಂಶದ ಆಧಾರದ ಮೇಲೆ ನಗರ ಸ್ಥಳೀಯ ಸಂಸ್ಥೆಗಳು ಬೀದಿ ಬದಿ ವ್ಯಾಪಾರಿಗಳೆಂದು ಪರಿಗಣಿಸಿ ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಚಾಲನೆ ದೊರೆತಿರುವುದು ಸ್ವಾಗತಾ ರ್ಹ.

ಕಡಿಮೆ ಬಡ್ಡಿ ದರದಲ್ಲಿ ,ತೀರ ಸರಳೀಕೃತ ನಿಬಂಧನೆಗೆ ಒಳಪಟ್ಟು ಹತ್ತಿರದ ಬ್ಯಾಂಕುಗಳಿಂದ ಈಗಾಗಲೇ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುತ್ತಿರುವ ಈ ಕಿರು ಸಾಲ ಸೌಲಭ್ಯ ಮುಂದಿನ ದಿನಗಳಲ್ಲಿ ಹಾಲು ವ್ಯಾಪಾರವನ್ನೇ ನಂಬಿಕೊಂಡು ಬದುಕುತ್ತಿರುವ ಎಲ್ಲಾ ಹಾಲು ಮಾರಾಟಗಾರರು ಮತ್ತು ವಿತರಕರಿಗೆ ದೊರೆಯುವುದರಿಂದ ಲಕ್ಷಾಂತರ ಕುಟುಂಬಗಳ ಜೀವನ ಮಟ್ಟದಲ್ಲಿ ಸುಧಾರಣೆಯನ್ನು ಕಾಣಬಹುದು ಎಂದು ಅವರು ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.

   

Related Articles

error: Content is protected !!