ಕುಂದಾಪುರ:ನಗರದ ಒಂಬತ್ತುದಂಡಿಗೆಯ ಪಡುಕೇರಿಯಲ್ಲಿರುವ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಚಿನ್ನದ ಮುಖವಾಡ ಸಮರ್ಪಣೆಯು ದಿನಾಂಕ 08.03.2023 ರಿಂದ 10.03.2023 ರ ವರೆಗೆ ನಡೆಯಲಿದೆ ಎಂದು ಅಧ್ಯಕ್ಷರಾದ ನಾಗರಾಜ್ ಕಾಮಧೇನು ತಿಳಿಸಿದ್ದಾರೆ
ಮಾರ್ಚ್ 8.9.10 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು ದೇವಸ್ಥಾನದ ಅರ್ಚಕರಾದ ಶ್ರೀಯುತ ವಿಶ್ವನಾಥ ಉಪಾಧ್ಯಾಯ ಹಾಗೂ ಶ್ರೀಯುತ ರವೀಶ್ ಹೊಳ್ಳರವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು ಮಾರ್ಚ್ 10 ರಂದು ಶ್ರೀ ದೇವಿಗೆ ಚಿನ್ನದ ಮುಖವಾಡವನ್ನು ಸಮರ್ಪಿಸಲಾಗುವುದು ತದನಂತರ ಅನ್ನಸಂತರ್ಪಣೆ ಜರುಗಲಿದ್ದು ಮಧ್ಯಾಹ್ನ 1.00ರಿಂದ ಶ್ರೀದೇವಿಗೆ ಅರ್ಪಿತವಾದ ಸೀರೆಗಳ ಏಲಂ ನಡೆಯಲಿದೆ
ಸಂಜೆ 7.00ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಚಿಕ್ಕಮ್ಮ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ದೇವರಾಯ ಎಂ ಶೇರೆಗಾರ್ ಕದಂಬ ಗ್ರೂಫ್ ಆಫ್ ಹೊಟೇಲ್ಸ್ ನ ಎನ್ ವಿ ರಾಘವೇಂದ್ರ ರಾವ್ ಹಾಗೂ ದಿನೇಶ್ ಪ್ರಿಂಟರ್ಸ್ ನ ದಿನೇಶ್ ಕುಂದಾಪುರ ಭಾಗವಹಿಸಲಿದ್ದು ರಾತ್ರಿ ಗಂಟೆ 8.00 ರಿಂದ ಶ್ರೀ ಗಣೇಶ್ ಬೀಜಾಡಿ ಮತ್ತು ಬಳಗದವರಿಂದ ಭಕ್ತಿ-ಭಾವ ಗಾನಸುಧೆ ಜರುಗಲಿದೆ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಸಲ್ಲಿಸುವವರು ಮಾರ್ಚ್ 7 ನೇ ತಾರೀಖಿನಂದು ಮಂಗಳವಾರ ಮಧ್ಯಾಹ್ನ 3.00 ರಿಂದ ಸಂಜೆ 7.00 ರ ಒಳಗೆ ಶ್ರೀ ಚಿಕ್ಕಮ್ಮ ದೇವಸ್ಥಾನದ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕೆಂದು ನಾಗರಾಜ್ ಕಾಮಧೇನು ವಿನಂತಿಸಿದ್ದಾರೆ