Home » ಮುಸ್ಲಿಂರ ಮೀಸಲಾತಿ ದುಪ್ಪಟ್ಟಿಗೆ ಆಯೋಗ ಶಿಪಾರಸ್ಸು
 

ಮುಸ್ಲಿಂರ ಮೀಸಲಾತಿ ದುಪ್ಪಟ್ಟಿಗೆ ಆಯೋಗ ಶಿಪಾರಸ್ಸು

ಸೋರಿಕೆಯಾದ ವರದಿ

by Kundapur Xpress
Spread the love

ಬೆಂಗಳೂರು : ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಘೋಷಿಸಿರುವ ಬೆನ್ನಲ್ಲೇ ಈಗ, ಹಿಂದುಳಿದ ವರ್ಗಗಳ ಆಯೋಗವೂ, ಮುಸ್ಲಿಮರಿಗೆ ನೀಡಲಾಗುತ್ತಿದ್ದ ಎಲ್ಲ ರೀತಿಯ ಮೀಸಲಾತಿಯನ್ನು ದುಪ್ಪಟ್ಟು ಮಾಡಬೇಕು ಎಂದು ಶಿಫಾರಸು ಮಾಡಿದೆ ಎಂದು ಸೋರಿಕೆಯಾದ ವರದಿಯಿಂದ ಬಹಿರಂಗವಾಗಿದೆ.

ಸದ್ಯ ಒಬಿಸಿ ಪಟ್ಟಿಯಲ್ಲಿರುವ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇದನ್ನು ಶೇ.8ಕ್ಕೆ ಏರಿಸಬೇಕು ಎಂದು ಅದು ಶಿಫಾರಸು ಮಾಡಿದೆ. ಅಷ್ಟೇ ಅಲ್ಲ, ಒಬಿಸಿ ಮೀಸಲಾತಿಯನ್ನು ಶೇ.32ರಿಂದ ಶೇ.51ಕ್ಕೆ ಒಟ್ಟಾರೆ ಮೀಸಲಾತಿಯನ್ನು ಶೇ.85.1ಕ್ಕೆ ಏರಿಕೆ ಮಾಡಬೇಕು ಎಂದೂ ಸಲಹೆ ನೀಡಿದೆ. ಹೀಗಾಗಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.14.9ರಷ್ಟು ಮಾತ್ರ ಸಾಮಾನ್ಯ ವರ್ಗ ಉಳಿಯಲಿದೆ.

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿಯಲ್ಲಿ ಈ ಶಿಫಾರಸುಗಳನ್ನು ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಯಲ್ಲಿ 2ಬಿ ಪ್ರವರ್ಗದಲ್ಲಿ ಬರುವ ಮುಸ್ಲಿಂ ಸಮುದಾಯದವರ ಜನಸಂಖ್ಯೆ ರಾಜ್ಯದಲ್ಲಿ 75.25 ಲಕ್ಷದಷ್ಟಿದೆ. ಹೀಗಿರುವಾಗ ಅವರ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಶೇ.8ಕ್ಕೆ ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದೆ. ಲಿಂಗಾಯತ ಉಪಜಾತಿಗಳ ಜನಸಂಖ್ಯೆ (3ಬಿ ಅಡಿಯಲ್ಲಿ ಬರುವ) 81 ಲಕ್ಷದಷ್ಟಿದ್ದು, ಶೇ.8ರಷ್ಟು ಮೀಸಲಾತಿ ಹಾಗೂ ಒಕ್ಕಲಿಗ ಉಪಜಾತಿಗಳ ಜನಸಂಖ್ಯೆ (3ಎ ಅಡಿಯಲ್ಲಿ ಬರುವ) 72 ಲಕ್ಷದಷ್ಟಿದ್ದು ಇವರಿಗೆ ಶೇ.7ರಷ್ಟು ಮೀಸಲಾತಿ ನೀಡಿ ಎಂದು ವರದಿಯಲ್ಲಿ ತಿಳಿಸಿದೆ. ಅಲ್ಲದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವನ್ನು ಹೊರತುಪಡಿಸಿ ಉಳಿದ ಜಾತಿಗಳ ಮೀಸಲಾತಿಯ ಬದಲಾವಣೆಗೆ ಶಿಫಾರಸು ಮಾಡಿದೆ

 

Related Articles

error: Content is protected !!