ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇಗುಲದಲ್ಲಿ ನಾಳೆ ಶ್ರೀ ಗಣೇಶ ಚತುರ್ಥಿ ಮಹೋತ್ಸವ ನಡೆಯಲಿದೆ ನಾಳೆ ಸೆ.18 ರಂದು ಗಣೇಶ ಚತುರ್ಥಿಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.
ಸೆ. 18 ರಂದು ಬೆಳಗ್ಗೆ 8 ರಿಂದ ಶ್ರೀ ಮಹಾಗಣಪತಿ ಹೋಮ 1008 ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ನಡೆಯಲಿದ್ದು ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಸಂಜೆ 6 ರಿಂದ ರಂಗ ಪೂಜೆ ಸೇವೆ ನಡೆಯಲಿದೆ
ಸೆ. 19 ರಂದು ಬೆಳಗ್ಗೆ 10 ರಿಂದ ಶ್ರೀ ಸತ್ಯಗಣಪತಿ ವೃತ ಹಾಗೂ ಕಥಾ ನಿರೂಪಣೆ, ಮಧ್ಯಾಹ್ನ 1 ರಿಂದ ಮಹಾಪೂಜೆ ಮಹಾ ಮಂಗಳಾರತಿ ಸೇವೆ ನಡೆಯಲಿದೆ
ಸೆ. 20 ರಂದು ಬೆಳಗ್ಗೆ 9 ರಿಂದ ಲಕ್ಷ ದೂರ್ವಾರ್ಚನೆ, ಸಿಂಧೂರಾರ್ಚನೆ ನಡೆಯಲಿದು ಮಧ್ಯಾಹ್ನ 1 ರಿಂದ ಮಹಾಪೂಜೆ ಜರಗಲಿದೆ
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸೆ. 18 ರಂದು ಬೆಳಗ್ಗೆ 10.30 ರಿಂದ ವಿಶೇಷವಾದ್ಯ ಗೋಷ್ಠಿ ಸಂಜೆ 6.30 ರಿಂದ ಭರತ ನಾಟ್ಯ ಹಾಗೂ ನೃತ್ಯ ರೂಪಕ ನಡೆಯಲಿದೆ
ಸೆ. 19 ರಂದು ಸಂಜೆ 6.30 ರಿಂದ ನರಕಾಸುರ ವಧೆ ಮತ್ತು ಗರುಡ ಗರ್ವಭಂಗ ಗೊಂಬೆಯಾಟ ಪ್ರದರ್ಶನ ಜರುಗಲಿದೆ
ಸೆ. 20 ರಂದು ಸಂಜೆ 6.30 ರಿಂದ ಮಾಯಾ ಬಜಾರ್ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಧರ್ಮದರ್ಶಿ ಎಚ್. ಬಾಲಚಂದ್ರ ಭಟ್ ತಿಳಿಸಿದ್ದು ಮೇಲಿನ ಎಲ್ಲಾ ಧಾರ್ಮಿಕ ಹಾಗಊ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ವಿನಂತಿಸಿದ್ದಾರೆ