Home » ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
 

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

ಡಿ.1ರಂದು ನಾಳೆ ದೀಪೋತ್ಸವ

by Kundapur Xpress
Spread the love

ಉಡುಪಿ : ದೊಡ್ಡಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಡಿ.1ರಂದು ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಲ್ಲಿ ರಂಗ ಪೂಜೆ ಸಹಿತ ದೀಪೋತ್ಸವವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ನೇತೃತ್ವದಲ್ಲಿ ನಡೆಯಲಿದೆ.

ಸಂಜೆ 6.00 ಗಂಟೆಗೆ ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ದೀಪ ಪ್ರಜ್ವಲನೆಯ ನಂತರ ಕ್ಷೇತ್ರದಲ್ಲಿ ರಾತ್ರಿಯ ಕಲೋಕ್ತ ಪೂಜಾ ಸಹಿತ ರಂಗ ಪೂಜೆ, ಪ್ರಸಾದ ವಿತರಣೆ ನೆರವೇರಲಿದೆ.

ಈ ದೀಪೋತ್ಸವಕ್ಕೆ ಭಕ್ತರು ಕ್ಷೇತ್ರಕ್ಕೆ ಎಣ್ಣೆ ಹಣತೆ ಬತ್ತಿಯನ್ನು ಸಮರ್ಪಿಸಬಹುದು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

 

Related Articles

error: Content is protected !!