ಶ್ರೀ ಮೈಲಾರೇಶ್ವರ ದೇವರ ಜೀರ್ಣೋದ್ಧಾರ ಪೂರ್ವಕ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬಹ್ಮಕಲಶೋತ್ಸವವು ವಿದ್ವಾನ್ ಶ್ರೀ ಕೆ ಚಂದ್ರಶೇಖರ ಸೋಮಯಾಜಿ ಯವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಪುಣ್ಯಾಹ,ನಂದಿ,ಋತ್ವಿಗರಣಿ,ಗಣಯಾಗ,ಬಿಂಬಶುದ್ಧಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸ್ಧಾನಶುದ್ಧಿ ಪ್ರಸಾದ ಶುದ್ದಿ ವಾಸ್ತು ಪೂಜೆ ಬಲಿ ಪ್ರತಿಷ್ಠಾಧಿವಾಸಾದಿ ಹೋಮ,ಶಯನೋತ್ಸವ, ರಾಕ್ಷೋಘ್ನಹೋಮ ನಡೆಸಲಾಯಿತು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ದೇವಾಲಯದ ವಠಾರದಲ್ಲಿ ವಾದ್ಯಗೋಷ್ಠಿಯೊಂದಿಗೆ ನೃತ್ಯ ಭಜನೆ ಎರ್ಪಡಿಸಲಾಗಿತ್ತು ಸಾಂತವಾರದ ಶ್ರೀವೀರಾಂಜನೇಯ ಭಜನಾ ಮಂಡಳಿ, ಶ್ರೀ ಮಹಾವಿಷ್ಣು ಭಜನಾ ಮಂಡಲಿ ದೇವಲ್ಕುಂದ,ಶ್ರೀ ಮಾಣಿ ಸಿದ್ದಲಿಂಗೇಶ್ವರ ಭಜನಾ ಮಂಡಲಿ ಮೊವಾಡಿ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು ಇದೇ ಸಂದರ್ಭದಲ್ಲಿ ಭಜನಾ ತಂಡವನ್ನು ಗೌರವಿಸಲಾಯಿತು ಡಿ.ಸತೀಶ್ ಕಾರ್ಯಕ್ರಮ ನಿರ್ವಹಿಸಿದರು