Home » ಪುಟಾಣಿ ಮಕ್ಕಳ ಬೇಸಿಗೆ ಕಲರವ
 

ಪುಟಾಣಿ ಮಕ್ಕಳ ಬೇಸಿಗೆ ಕಲರವ

by Kundapur Xpress
Spread the love

ಕೋಟ: ಮಕ್ಕಳ ಭೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ಪಾಂಡೇಶ್ವರ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಅಭಿಪ್ರಾಯಪಟ್ಟರು.ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನುದ್ದೇಶಿಸಿ ಮಾತನಾಡಿ ಸರಕಾರ ಮಕ್ಕಳ ಬೇಸಿಗೆ ರಜೆಗೆ ಪೂರಕವಾದ ವಾತಾವರಣವನ್ನು ಶಿಬಿರದ ಮೂಲಕ ನೀಡುತ್ತಿದೆ.ಮನೆಯಲ್ಲೆ ಕಾಲಕಳೆಯುವುದಕ್ಕಿಂತ ಶಿಬಿರದ ಮೂಲಕ ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವಂತ್ತಾಗುತ್ತದೆ ಈ ದಿಸೆಯಲ್ಲಿ ಇಲ್ಲಿನ ಶಿಬಿರ ಮತ್ತಷ್ಟು ವೈವಿಧ್ಯತೆ ತಾಣವಾಗಿ ಮೂಡಿಬರಲಿ ಎಂದು ಆಶಿಸಿದರು. ಶಿಬಿರವನ್ನು ಶಿಬಿರಾರ್ಥಿಗಳಿಂದ ಉದ್ಘಾಟಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಸಂಜೀವಿನಿ ಮುಖ್ಯ ಬರಹಗಾರ ಉಷಾ ಗಣೇಶ, ಸಂಪನ್ಮೂಲ ವ್ಯಕ್ತಿಯಾಗಿ ಜ್ಞಾನೇಶ್ವರಿ ಉಡುಪ, ಉಪಸ್ಥಿತಿದ್ದರು.
ಮಕ್ಕಳು ಕವನ ರಚನೆ, ಚುಕ್ಕಿ ರಂಗೋಲಿ, ಉಲ್ಲನ್ ಕ್ರಾಫ್ಟ್ ಮಾಡುವುದು ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಯಿತು. 52 ಮಕ್ಕಳು ಶಿಬಿರದಲ್ಲಿ ಭಾಗಿಯಾದರು. ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ನಿರೂಪಿಸಿ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ವಿಜಯ ಭಂಡಾರಿ ಧನ್ಯವಾದಗೈದರು.

ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಸಾಸ್ತಾನ ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ, ಇವರ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನುದ್ದೇಶಿಸಿ ಪಾಂಡೇಶ್ವರ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಮಾತನಾಡಿದರು. ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್, ಸಂಜೀವಿನಿ ಮುಖ್ಯ ಬರಹಗಾರ ಉಷಾ ಗಣೇಶ, ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಮತ್ತಿತರರು ಇದ್ದರು.

   

Related Articles

error: Content is protected !!