ನಿಷ್ಕಳಂಕ ಮಹಾದೇವ ದೇವಸ್ಥಾನ – ಇದು ಪಂಚಮ ಶಿವಲಿಂಗಗಳ ಪವಾಡ ಕ್ಷೇತ್ರ ನಿಷ್ಕಳಂಕ ಐದು ಶಿವಲಿಂಗಗಳ ಪವಿತ್ರವಾದ ಈ ದೇವಸ್ಥಾನವಿರೋದು ಗುಜರಾತ್ನ ಭಾವನಗರದ ಕೋಲಿಯಾಕ್ ನಲ್ಲಿ .ಅರಿಬ್ಬೀ ಸಮುದ್ರದ ಮಧ್ಯದಲ್ಲಿದೆ ಈ ನಿಷ್ಕಳಂಕ ಪಂಚ ಶಿವಲಿಂಗಗಳಿರುವ ಈ ಕ್ಷೇತ್ರವು ಅರಿಬ್ಬೀ ಸಮುದ್ರದ ಮಧ್ಯದಲ್ಲಿದೆ. ವಿಶ್ವದಲ್ಲಿರುವ ಪಂಚ ಶಿವಲಿಂಗಗಳಲ್ಲಿ ಸಮುದ್ರದ ಮಧ್ಯಭಾಗದಲ್ಲಿರುವ ಏಕೈಕ ಕ್ಷೇತ್ರ ಈ ನಿಷ್ಕಳಂಕ ದೇವಸ್ಥಾನ. ಇಲ್ಲಿರುವ ಶಿವಲಿಂಗಗಳ ಎತ್ತರವು ಅನುದಿನವು ಬೇರೆ ಬೇರೆಯಾಗಿರುತ್ತದೆ. ಅನುದಿನವು 2 ಗಂಟೆಗಳ ಕಾಲ ಸಮುದ್ರವು ಭಕ್ತರಿಗೆ ಈ ಶಿವಲಿಂಗಗಳ ದರ್ಶನ ಮಾಡಲು ದಾರಿ ಮಾಡಿಕೊಡುತ್ತದೆ. ಈ ಘಟನೆಯು ನಿಜವಾಗಿಯೂ ಒಂದು ಪವಾಡವೇ ಸರಿ.
ಸರಿಸುಮಾರು ಒಂದು ದಿನಕ್ಕೆ ಹದಿನೈದು ಸಾವಿರ ಜನ ಈ ಶಿವಲಿಂಗಗಳ ದರ್ಶನವನ್ನು ಪಡೆಯುತ್ತಾರೆ. ಐದು ಶಿವಲಿಂಗಗಳ ಬಳಿ 5 ನಂದಿಗಳು ಇರುವುದು ಈ ಕ್ಷೇತ್ರದ ಇನ್ನೊಂದು ವಿಶೇಷ. ಸಾಗರವೇ ಶಿವನ ದರ್ಶನಕ್ಕೆ ದಾರಿ ಮಾಡಿಕೊಡುವ ಏಕೈಕ ಕ್ಷೇತ್ರವೆಂದರೆ ಇದು. ಶ್ರಾವಣ ಮಾಸದ ಅಮಾವಾಸ್ಯೆಯ ದಿನ ರಾತ್ರಿ ಇಲ್ಲಿ ಪ್ರಸಿದ್ಧ ಜಾತ್ರೆ ನಡೆಯುತ್ತದೆ .
ಇಲ್ಲಿಯ ಸ್ಥಳ ಪುರಾಣದ ಪ್ರಕಾರಪಾಂಡವರು ಈ ಕ್ಷೇತ್ರದಲ್ಲಿ ಪಂಚ ಶಿವಲಿಂಗಗಳನ್ನು ಸ್ಥಾಪಿಸಿದರೆಂದು ಪ್ರತೀತಿ. ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ ತಾವು ಮಾಡಿದ ಪಾಪ ಕರ್ಮಗಳನ್ನು ಪರಿಹಾರವನ್ನು ಮಾಡಿಕೊಳ್ಳಲು ಶ್ರೀ ಕೃಷ್ಣ ನಲ್ಲಿ ಪಾಂಡವರು ಕೇಳಿದಾಗ ಶ್ರೀ ಕೃಷ್ಣನು ಕಪ್ಪು ಧ್ವಜ ಮತ್ತು ಕಪ್ಪು ಹಸುವನ್ನು ಪಾಂಡವರಿಗೆ ಕೊಟ್ಟು
ಈ ಹಸು ಮತ್ತು ಬಾವುಟ ಎಲ್ಲಿ ಬಿಳಿ ಬಣ್ಣಕ್ಕೆ ಎಲ್ತಿಲಿ ರುಗುವುದು ಅಲ್ಲಿ ನೀವು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಎಂದು ಆಜ್ಞೆ ಮಾಡುತ್ತಾನೆ ಹಾಗೆಯೇ ಪಾಂಡವರು ನಿಷ್ಕಳಂಕ ಕ್ಷೇತ್ರಕ್ಕೆ ಬಂದಾಗ ಹಸು ಮತ್ತು ಧ್ವಜ ಎರಡು ಬಿಳಿ ಬಣ್ಣಕ್ಕೆ ತಿರುಗುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಆದುದರಿಂದಲೇ ಪಾಂಡವರು ಈ ಪಂಚ ಶಿವಲಿಂಗಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು
ಎಂದು ಹೇಳಲಾಗುತ್ತದೆ . ಏನೇ ಇರಲಿ ಸಮುದ್ರದ ಮಧ್ಯೆ ಪಂಚಶಿವಲಿಂಗಗಳನ್ನು ಹೊಂದಿರುವ ಏಕೈಕ ಕ್ಷೇತ್ರವೆಂದರೆ ನಿಷ್ಕಳಂಕ ದೇವಸ್ಥಾನ ಮಾತ್ರ
ಪ್ರದೀಪ್, ಚಿನ್ಮಯಿ ಆಸ್ಪತ್ರೆ , ಕುಂದಾಪುರ