ಕಟಪಾಡಿ : ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿ ಎಸ್ ಐ) ನಡೆಸುವ ಸಿ ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅನನ್ಯ ನಾಯಕ್ 371 ಅಂಕಗಳೊಂದಿಗೆ ಎರಡೂ ಮಾಡ್ಯೂಲ್ ಗಳಲ್ಲಿ ಉತ್ತೀರ್ಣರಾಗಿದ್ದು ಮೇಘಾ (210) , ಪೂಜಾರಿ ಖುಷಿ ಸುಧಾಕರ್ (204), ಶ್ರುತಿ ಶಾನುಭಾಗ್ (203), ದೀಪ್ತಿ ಶೆಟ್ಟಿ (203), ತೇಜಸ್ವರ್ಮ ಕುಂಡಾಡಿ, ಭಾರ್ಗವಿ ಬಿ ಪುರಾಣಿಕ್ ಮತ್ತು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿಗಳಾದ ಸೃಜನ್ ಶೇಖ 407 ಅಂಕಗಳೊಂದಿಗೆ ಎರಡೂ ಮಾಡ್ಯೂಲ್ ಗಳಲ್ಲಿ ಉತ್ತೀರ್ಣರಾಗಿದ್ದು ಶಿವಾನಿ ಎಸ್ ರಾವ್ (206), ಪ್ರಜ್ಞಾ ಎಸ್ ಭಟ್ , ಕೆ ಕೃಷ್ಣಾನಂದ ಪ್ರಭು ಹಾಗೂ ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಾದ ಪ್ರತೀಕ್ಷಾ(258), ಸತ್ಯಶ್ರೀ ಪೈ(229) , ಶ್ರೇಯಾ ಉತ್ತೀರ್ಣರಾಗಿದ್ದಾರೆ .
ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.