Home » ಗುಂಪು ಚರ್ಚೆ, ಅಣಕು ಸಂದರ್ಶನ:ಕಾರ್ಯಾಗಾರ
 

ಗುಂಪು ಚರ್ಚೆ, ಅಣಕು ಸಂದರ್ಶನ:ಕಾರ್ಯಾಗಾರ

by Kundapur Xpress
Spread the love

ಕುಂದಾಪುರ  : ನಾವು ದೈರ್ಯದಿಂದ ಸಂದರ್ಶನಗಳನ್ನು ಎದುರಿಸಲು ನಮ್ಮಲ್ಲಿ ಸಾಕಷ್ಟು ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ಇದರಿಂದ ಕೇವಲ ಕೆಲಸಗಳನ್ನು ಗಳಿಸಿಕೊಳ್ಳುವುದಷ್ಟೆ ಅಲ್ಲದೆ ಉನ್ನತ ಸ್ತರ ಹುದ್ದೆಗಳನ್ನು ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಚಂದನ್ ರಾವ್, ಮುಖ್ಯ ತರಬೇತಿದಾರರು, ಸ್ವತಂತ್ರ ಪ್ರವೇಶ ಸಲಹೆಗಾರ ಮತ್ತು ಸಾಪ್ಟ್‍ಸ್ಕಿಲ್ ಟ್ರೈನರ್, ಉಡುಪಿ ಇವರು ತಿಳಿಸಿದರು. ಇವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇದರ ಉದ್ಯೋಗ ಮಾಹಿತಿ ಮತ್ತು ಸ್ಥಾನೀಕರಣ ಘಟಕ ಇದರ ವತಿಯಿಂದ ಸಂಘಟಿಸಲಾದ “ಗುಂಪು ಚರ್ಚೆ, ಅಣಕು ಸಂದರ್ಶನ ಹಾಗೂ ಬಯೋಡೇಟಾ ಬರೆಯುವುದು” ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರ ನಾಯ್ಕ ಮತ್ತು ಗಣೇಶ ಭಾಗವತ್, ಹಿರಿಯ ಶ್ರೇಣಿ ಉಪನ್ಯಾಸಕರು, ಡಯಟ್ ಉಡುಪಿ ಇವರು ಶಿಕ್ಷಕ ತರಬೇತಿಯ ಕುರಿತು ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯೊಂದಿಗೆ ಕಾಲೇಜಿನಲ್ಲಿ ಲಭ್ಯವಿರುವ ಗ್ರಂಥಾಲಯ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡಾಗ ಜೀವನದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕರಾದ ನಾಗರಾಜ ಯು, ವಿದ್ಯಾರ್ಥಿ ಪ್ರತಿನಿಧಿಗಳಾದ ಹರ್ಷ, ನಾಗಶ್ರೀ ಮತ್ತು ಗಣೇಶ ಬಿ.ಎ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚರಿತ ಮತ್ತು ಅನುಷಾ ತೃತೀಯ ಬಿ.ಕಾಂ. ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ರಾಮರಾಯ ಆಚಾರ್ಯ ಸಂಚಾಲಕರು, ಉದ್ಯೋಗ ಮಾಹಿತಿ ಮತ್ತು ಸ್ಥಾನೀಕರಣ ಘಟಕ, ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಸಂತೋಷ ನಾಯ್ಕ ಹೆಚ್., ಸಂಚಾಲಕರು ಉದ್ಯೋಗ ಮಾಹಿತಿ ಮತ್ತು ಸ್ಥಾನೀಕರಣ ಘಟಕ ಇವರು ವಂದಿಸಿದರು. ಆಲಿಯಾ ಕೌಸರ್, ದ್ವಿತೀಯ ಎಂ.ಕಾಂ. ಇವರು ಕಾರ್ಯಕ್ರಮ ನಿರ್ವಹಿಸಿದರು.

   

Related Articles

error: Content is protected !!