Home » ಅಪರಾಧಿಯನ್ನು ಬಂಧಿಸಲು ಆಗ್ರಹ
 

ಅಪರಾಧಿಯನ್ನು ಬಂಧಿಸಲು ಆಗ್ರಹ

by Kundapur Xpress
Spread the love

ಬೈಂದೂರು : ಬೈಂದೂರು ತಾಲೂಕಿನ  ಬೆಳ್ಳಾಲ ಗ್ರಾಮದಲ್ಲಿ ಗುಂಡೇಟಿನಿಂದ ಬಲಿಯಾದ ಸರಣಿ ಗೋ ಹತ್ಯೆಯನ್ನು ಖಂಡಿಸಿ. ಅಪರಾಧಿಯಾದ ನರಸಿಂಹ ಕುಲಾಲ್ ನನ್ನು ಶೀಘ್ರವೇ   ಬಂಧಿಸುವಂತೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರೀತಿಯ  ಭದ್ರತೆಯ ರಕ್ಷಣೆಯನ್ನು ನೀಡಬೇಕಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಪ್ರತಿಭಟನೆಯ ಮೂಲಕ ಕೊಲ್ಲೂರಿನಲ್ಲಿ  ಆಗ್ರಹವನ್ನು ಮಾಡಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ ಪಂಪ್ವೆಲ್ ರವರು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಸದಾಕಾಲ ವಿಶ್ವ ಹಿಂದು ಪರಿಷತ್ ನಿಮ್ಮೊಂದಿಗೆ ಜೊತೆಯಾಗಲಿದೆ ಅನ್ನುವ ಸಂದೇಶದ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಿದರು

ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಸಹಕಾರಿಯ ದರ್ಶಿ ಶರಣ್ ಪಂಪ್ವೆಲ್, ಜಿಲ್ಲಾ ಸಹಕಾರ್ಯದರ್ಶಿ  ಸುರೇಂದ್ರ ಕೋಟೇಶ್ವರ, ಜಿಲ್ಲಾ ಸಹಸಂಯೋಜಕ ಗುರುರಾಜ್ ಪುತ್ರನ್  ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ್ ಕೊಲ್ಲೂರು, ತಾಲೂಕು  ಕಾರ್ಯದರ್ಶಿ ಶ್ರೀನಿವಾಸ್ ಮುದುರು, ಬಜರಂಗದಳ ಸಂಯೋಜಕರಾದ ಸುಧಾಕರ್ ಉಪ್ಪುಂದ,ವಸಂತ್ ಸಂಗಮ್ ಕುಂದಾಪುರ ತಾಲೂಕು ಬಜರಂಗದಳ ಸಂಯೋಜಕರು ಹಾಗೂ ಎಲ್ಲಾ ಘಟಕದ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು.

   

Related Articles

error: Content is protected !!