Home » ಶಾಲಾ ಆರಂಭ ಮುಂದೂಡಲು ಮನವಿ
 

ಶಾಲಾ ಆರಂಭ ಮುಂದೂಡಲು ಮನವಿ

by Kundapur Xpress
Spread the love

ಉಡುಪಿ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಪ್ರದೇಶ ಹಾಗೂ ರಾಜ್ಯದ ಹಲವಡೆ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಾಥಮಿಕ ಹಾಗು ಪ್ರೌಢಶಾಲಾ ಆರಂಭವನ್ನು ಒಂದು ವಾರಗಳ ಕಾಲ ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಉಡುಪಿ ಶಾಸಕರಾದ ಸುವರ್ಣ ರವರು ಮನವಿ ಮಾಡಿದ್ದಾರೆ ಶಿಕ್ಷಣ ಇಲಾಖೆ ಆದೇಶ ಪ್ರಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಮೇ 31 ರಂದು ಆರಂಭವಾಗಲಿದ್ದು ಈ ಬಾರಿ ಮುಂಗಾರು ಮಳೆ ವಿಳಂಬದಿಂದಾಗಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಹಾಗಾಗಿ ಶಾಲಾ ಆರಂಭವನ್ನು ಒಂದು ವಾರಗಳ ಕಾಲ ಮುಂದೂಡಬೇಕೆಂದು ಶಾಸಕರಾದ ಯಶಪಾಲ್‌ ಸುವರ್ಣ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ

   

Related Articles

error: Content is protected !!