Home » ಭಕ್ತರ ಪರೀಕ್ಷೆ
 

ಭಕ್ತರ ಪರೀಕ್ಷೆ

by Kundapur Xpress
Spread the love

ಸಮಸ್ಯೆ-ಸಂಕಷ್ಟಗಳು ಬಾರದೆ ನಾವೆಂದೂ ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಬದುಕಿನಲ್ಲಿ ನಾವು ಎಲ್ಲಿ ಎಡವಿದೆವು? ಯಾವ ಹಂತದಲ್ಲಿ ವಿವೇಚನೆಯನ್ನು ಕಳೆದುಕೊಂಡೆವು ಎಂಬಿತ್ಯಾದಿ ವಿಷಯಗಳಿಗೆ ಸಂಬAಧಿಸಿ ಆತ್ಮಾವಲೋಕನ ಮಾಡಿಕೊಳ್ಳಲು ನಾವು ಸತ್ಯಕ್ಕೆ ಮುಖಮಾಡುವುದು ಅಗತ್ಯ. ಸುಖ ಲೋಲುಪತೆಯು ನಮ್ಮನ್ನು ಭ್ರಾಮಕ ಜಗತ್ತಿನಲ್ಲಿ ಮುಳುಗಿಸುವುದು ಮಾತ್ರವಲ್ಲ ದೇವರಿಂದಲೂ ನಮ್ಮನ್ನು ವಿಮುಖಗೊಳಿಸುತ್ತದೆ. ಒಂದೊಮ್ಮೆ ದೇವರನ್ನು ನಾವು ಮರೆಯದಿದ್ದರೂ ಐಹಿಕ ಸುಖಭೋಗಗಳಲ್ಲಿ ಮುಳುಗಿರುವ ನಮಗೆ ಆತನ ಜತೆಗಿನ ‘ನಂಟು’ ಕೇವಲ ‘ಗಂಟು’ ಬೇಡಲಷ್ಟೇ ಸೀಮಿತವಾಗಿರುತ್ತದೆ. ಆದುದರಿಂದಲೇ ದೇವರು ಆಗೀಗ ಎಂಬAತೆ ನಮ್ಮ ಸತ್ತ್ವ ಪರೀಕ್ಷೆ ಮಾಡುತ್ತಾನೆ. ನಮ್ಮ ಅಹಂಕಾರವನ್ನು ಮುರಿಯುವುದೇ ಆತನ ಕೆಲಸ! ಏಕೆಂದರೆ ನಾವು ಆತನ ಪರಮಭಕ್ತರಲ್ಲವೇ? ಭಕ್ತರನ್ನು ಪರೀಕ್ಷೆಗೊಡ್ಡುವುದೆಂದರೆ ದೇವರಿಗೆ ಅದೆಷ್ಟು ಸಂತೋಷ ಎನ್ನುವುದನ್ನು ನಾವು ಅರಿಯಲಾರೆವು. ನಮ್ಮೊಳಗಿನ ಭಕ್ತಿ, ಶ್ರದ್ಧೆಗಳು ಐಹಿಕ ಸುಖ-ಭೋಗಗಳ ಪ್ರಾಪ್ತಿಗೆ ಸೀಮಿತವಾಗಿವೆಯೇ ಅಥವಾ ದೇವರ ಸಾನಿಧ್ಯವನ್ನು ಪಡೆಯಬೇಕೆಂಬ ಏಕೈಕ ಲಕ್ಷಕ್ಕೆ ಬದ್ಧವಾಗಿಯೇ ಎಂಬುದನ್ನು ಪರೀಕ್ಷಿಸುವುದೇ ದೇವರ ಇಚ್ಛೆ. ‘ಸಾವಿನ ರಹಸ್ಯ’ವೊಂದನ್ನು ಬಿಟ್ಟು ಬೇರೆ ಏನನ್ನು ಬೇಕಾದರೂ ಬೇಡಿಕೋ ಎಂದು ಯಮನು ನಚಿಕೇತನಿಗೆ ಹೇಳಿದಾಗ ಆತನು ಯಮನಿಗೆ ಕೊಟ್ಟ ಉತ್ತರ ಇದು” ‘ನ ವಿತ್ತೇನ ತರ್ಪಣೀಯ ಮನುಷ್ಯಃ’ ‘ಧನ-ಕನಕಗಳಿಂದ ನೀನು ಮನುಷ್ಯನನ್ನು ಎಷ್ಟು ಮಾತ್ರಕ್ಕೂ ತೃಪ್ತಿಪಡಿಸಲಾರೆ.’ ಮನುಷ್ಯನಲ್ಲಿ ಅಂತರ್ಗತವಾಗಿರುವ ಸ್ವಾರ್ಥದ ಆಳವನ್ನು ನಾವು ನಚಿಕೇತನ ಉತ್ದರಲ್ಲಿ ಕಾಣಬಹುದು. ಸುಖಭೋಗಗಳಲ್ಲಿ ಮುಳುಗಿರುವಷ್ಟು ಕಾಲ ದೇವರೊಡನೆ ನಾವು ನಡೆಸುವುದು ಕೇವಲ ವ್ಯಾಪಾರವಲ್ಲದೆ ಬೇರೇನೂ ಅಲ್ಲ!

   

Related Articles

error: Content is protected !!