257
ಕುಂದಾಪುರ : ಇತ್ತೀಚಿಗೆ ಕಾರ್ವಾಡಿ ಗ್ರಾಮದ ದೂಪದ ಕಟ್ಟೆ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಹಸುಗಳಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ
ಪ್ರದೀಪ್ ಶೆಟ್ಟಿ ಎಂಬುವರು ಕಂಡ್ಲೂರು ಕಡೆಯಿಂದ ವಾಲ್ತೂರು ಕಡೆಗೆ ಬರುತ್ತಿದ್ದಾಗ ರಸ್ತೆಗೆ ಅಡ್ಡ ಬಂದ ಎರಡು ದನಗಳಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮಣಿಪಾಲರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ ಅಪಘಾತದ ರಭಸಕ್ಕೆ ಒಂದು ಜಾನುವಾರು ಮೃತಪಟ್ಟಿದ್ದು ಮತ್ತೊಂದು ಜಾನುವಾರು ಗಾಯಗೊಂಡಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

